ಬೀಚಿಂಗ್: ಕೊರೋನಾ, ಹೆಚ್.ಎಂ.ಪಿ.ವಿ. ನಂತರ ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗದ ಆತಂಕ ಉಂಟಾಗಿದೆ.
ಮಂಕಿಪಾಕ್ಸ್ ನ ಹೊಸ ರೂಪಾಂತರಿ ತಳಿ, ಕ್ಲೇಡ್ 1b ಪತ್ತೆಯಾಗಿದೆ. ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವ ಕೇಂದ್ರ ಮಂಕಿಪಾಕ್ಸ್ ರೂಪಾಂತರಿ ಪತ್ತೆ ಹಚ್ಚಿರುವುದಾಗಿ ಮಾಹಿತಿ ಹಂಚಿಕೊಂಡಿದೆ.
ಕಾಂಗೋ ಮೂಲದ ಮತ್ತು ವಿದೇಶ ಪ್ರಯಾಣ ಇತಿಹಾಸ ಹೊಂದಿರುವ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ನ ಹೊಸ ರೂಪಾಂತರಿ ತಳಿ(ಹೊಸ ವಂಶಾವಳಿ) ಪತ್ತೆಯಾಗಿದೆ. ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಇತರ ನಾಲ್ವರಲ್ಲಿಯೂ ಈ ಸೋಂಕು ಹರಡಿದೆ. ಮಂಕಿಪಾಕ್ಸ್ ನಿಂದ ಜ್ವರದ ಜತೆಗೆ ಮೈಯಲ್ಲಿ ಸಣ್ಣ ಪ್ರಮಾಣದ ದದ್ದು, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಅಪರೂಪದ ಪ್ರಕರಣಗಳಲ್ಲಿ ಈ ಮಂಕಿಪಾಕ್ಸ್ ಸೋಂಕು ಪ್ರಾಣಾಪಾಯಕ್ಕೆ ಕಾರಣವಾಗುವ ಸಂಭವ ಇದೆ ಎಂದು ಹೇಳಲಾಗಿದೆ.
ಫ್ರಾನ್ಸ್ ನಂತರ, ರೂಪಾಂತರಿತ ಮಂಕಿಪಾಕ್ಸ್ ವೈರಸ್‌ನ ಹೊಸ ತಳಿ, ಕ್ಲೇಡ್ 1b ಅನ್ನು ಚೀನಾದಲ್ಲಿ ಗುರುತಿಸಲಾಗಿದೆ. ಇದು ಪತ್ತೆಯಾದ ನಂತರ ಝೆಜಿಯಾಂಗ್, ಗುವಾಂಗ್‌ಡಾಂಗ್, ಬೀಜಿಂಗ್ ಮತ್ತು ಟಿಯಾಂಜಿನ್‌ನಂತಹ ರಾಜ್ಯ ಮತ್ತು ಪ್ರಾಂತ್ಯಗಳು(ನಗರಗಳು) ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆ ಮತ್ತು ಪತ್ತೆಹಚ್ಚುವಿಕೆ, ಅಪಾಯದ ತನಿಖೆ, ಪ್ರಕರಣ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಕೈಗೊಳ್ಳಲು ಜಂಟಿ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯವಿಧಾನವನ್ನು ತ್ವರಿತವಾಗಿ ಪ್ರಾರಂಭಿಸಿವೆ.