ಬಾಕಿ ಕರ, ನೀರಿನ ಕಂದಾಯ ಪಾವತಿಸುವವರಿಗೆ ಗುಡ್ ನ್ಯೂಸ್

ಶಿವಮೊಗ್ಗ: ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ವತಿಯಿಂದ 2024-25 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ಜ.12 ರಂದು ಕೆಳಕಂಡ ಸ್ಥಳಗಳಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ.

ಕಲ್ಲಹಳ್ಳಿ, ಅಭಿಷ್ಠವರ ಗಣಪತಿ ದೇವಸ್ಥಾನದ ಹತ್ತಿರ ವಿನೋಬನಗರ, ಅಪೂರ್ವ ಕಾಲೇಜ್ ಎದುರು ಬೊಮ್ಮನಕಟ್ಟೆ ಮುಖ್ಯ ರಸ್ತೆ, ಗಣಪತಿ ದೇವಸ್ಥಾನದ ಹತ್ತಿರ ಕೃಷಿ ನಗರ, ಶಿವನ ಪಾರ್ಕ್ ಹತ್ತಿರ ಚಿಕ್ಕಲ್, ಆದಿಚುಂಚನಗಿರಿ ಶಾಲೆ ಎದುರು ಶರಾವತಿ ನಗರ ಈ ಸ್ಥಳಗಳಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದ್ದು, ಕಂದಾಯ ಪಾವತಿಸಬಹುದು.

ನೀರಿನ ಕಂದಾಯ ಪಾವತಿಸದಿದ್ದಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಕ.ನ.ನೀ.ಸ. ಮತ್ತು ಒ.ಚ. ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read