ನವದೆಹಲಿ: ಸಲಿಂಗ ವಿವಾಹದ ತೀರ್ಪನ್ನು ಪರಿಶೀಲಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ದೋಷವಿಲ್ಲ ಎಂದು ಸಲಿಂಗ ವಿವಾಹದ ತೀರ್ಪಿನ ಪುನರ್ ಪರಿಶೀಲನೆ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಅನುಮತಿ ನೀಡಲು ನಿರಾಕರಿಸಿದ ಅಕ್ಟೋಬರ್ 2023 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಅನುಮತಿಯನ್ನು ತಿರಸ್ಕರಿಸಿದ 2023 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಹೊಸ ಐದು ನ್ಯಾಯಾಧೀಶರ ಪೀಠವು ಗುರುವಾರ ಕೈಗೆತ್ತಿಕೊಂಡಿತ್ತು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್, ಬಿ.ವಿ. ನಾಗರತ್ನ, ಪಿ.ಎಸ್. ನರಸಿಂಹ ಮತ್ತು ದೀಪಂಕರ್ ದತ್ತ ಅವರನ್ನೊಳಗೊಂಡ ಪೀಠವು ಅರ್ಜಿಗಳ ಪರಿಶೀಲನೆ ನಡೆಸಿದೆ.