ನವದೆಹಲಿ: ದೆಹಲಿಯ ಇಂದಿರಾ ಗಾಂಧಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊಸಳೆ ತಲೆ ಬುರುಡೆ ಕಳ್ಳ ಸಾಗಾಣಿಕೆಗೆ ಯತ್ನಿಸಿದ ಕೆನಡಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಕೆನಡಾ ಮೂಲದ ವ್ಯಕ್ತಿ ಮಾಟ್ರಿರಿಯಲ್ ಎಂಬಾತ ವಿಮಾನ ಹತ್ತಲು ಯತ್ನಿಸುವಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದು, ತಲಬುರುಡೆ ಕಂಡು ಬಂದ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ತಪಾಸಣೆಯ ಸಂದರ್ಭದಲ್ಲಿ ಮೊಸಳೆ ಮರಿಯನ್ನು ಹೋಲುವ 770 ಗ್ರಾಂ ತೂಕದ ಚೂಪಾದ ಹಲ್ಲು ಹೊಂದಿರುವ ತಲೆ ಬುರುಡೆ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಇದು ಮೊಸಳೆ ಮರಿಯ ತಲೆ ಬುರುಡೆ ಎನ್ನುವುದು ದೃಢಪಟ್ಟಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗಿದೆ.
🚨 Canadian Man Arrested at IGI Airport, New Delhi for carrying Crocodile Skull 🐊
Customs Department
IGI Airport, New Delhi
Date: 06.01.2025Flight and Passenger Details:
•Flight Number: Air Canada (AC 051)
•Route: New Delhi to Canada
•Date of Departure: 06.01.2025… pic.twitter.com/qX4qX3nyqZ— Delhi Customs (Airport & General) (@AirportGenCus) January 9, 2025