ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಕೆಮಿಕಲ್ ಡಂಪ್ ಮಾಡುವ ವೇಳೆ ಉಸಿರುಗಟ್ಟಿ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಬಿಹಾರದ ಮೂಲಕ ರಜಿಕ್ (33) ಎಂಬುವವರು ಮೃತಪಟ್ಟಿದ್ದು, ಮೂವರು ಕಾರ್ಮಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಲಾರಿ ಹತ್ತಿ ಕೆಮಿಕಲ್ ಡಂಪ್ ಮಾಡುವಾಗ ಘಟನೆ ನಡೆದಿದ್ದು, ಉಸಿರುಗಟ್ಟಿ ಲಾರಿ ಮೇಲಿಂದ ಕಾರ್ಮಿಕ ಬಿದ್ದಿದ್ದಾನೆ. ನಂದಿಗಿರಿ ಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.