ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮನದ ಕಡಲು’ ಚಿತ್ರದ ‘ತುರ್ರ’ ಎಂಬ ವಿಡಿಯೋ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರು ಫಿದಾ ಆಗಿದ್ದಾರೆ. ಸಂಜಿತ್ ಹೆಗಡೆ, ವಿ ಹರಿಕೃಷ್ಣ ಮತ್ತು ಪ್ರಾರ್ಥನಾ ಈ ಹಾಡಿಗೆ ಧ್ವನಿಯಾಗಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಈಕೆ ಕೃಷ್ಣಪ್ಪ ತಮ್ಮ ಈಕೆ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಸುಮುಖ ಸೇರಿದಂತೆ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ ಪ್ರಮುಖ ಪಾತ್ರದಲ್ಲಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ವಿ ಮುರಳಿ ನೃತ್ಯ ನಿರ್ದೇಶನವಿದೆ.