ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಕೃಷಿ ಕಾರ್ಮಿಕರು, ವಾಹನ ಚಾಲಕರ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆ ಇರಲಿದೆ ಎಂದು ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿರುವ ಉದ್ಯೋಗಗಳ ಭವಿಷ್ಯ -2025ರ ವರದಿಯಲ್ಲಿ ತಿಳಿಸಲಾಗಿದೆ.
2030ರ ವೇಳೆಗೆ 17 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. 9.2 ಕೋಟಿ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಕ್ಯಾಷಿಯರ್, ಟಿಕೆಟ್ ಕ್ಲರ್ಕ್ ಗಳ ಹುದ್ದೆಗಳಿಗೆ ಬೇಡಿಕೆ ಇರುವುದಿಲ್ಲ. ಕೃಷಿ ಕಾರ್ಮಿಕರು, ವಾಹನ ಚಾಲಕರ ಹುದ್ದೆಗಳಿಗೆ ಚಿನ್ನ ಬೇಡಿಕೆ ಇರಲಿದೆ ಎಂದು ಹೇಳಲಾಗಿದೆ.
ಜನವರಿ 20 ರಿಂದ 25ರವರೆಗೆ ದಾವೋಸ್ ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ವರದಿ ಬಿಡುಗಡೆ ಮಾಡಲಾಗಿದೆ. 2030ರ ವೇಳೆಗೆ ಶೇಕಡ 22 ರಷ್ಟು ಉದ್ಯೋಗ ನವಷಟವಾಗುವ ಸಂಭವ ಇದೆ. ಈ ಸಮೀಕ್ಷೆಗಾಗಿ ಸುಮಾರು ಒಂದು ಸಾವಿರ ಕಂಪನಿಗಳ ದತ್ತಾಂಶ ಬಳಸಿಕೊಳ್ಳಲಾಗಿದ್ದು, ಕೌಶಲ ಕೊರತೆ ದೊಡ್ಡ ಸಮಸ್ಯೆ ಎನ್ನುವುದು ಗೊತ್ತಾಗಿದೆ. ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಸೈಬರ್ ಸೆಕ್ಯೂರಿಟಿ ಮತ್ತಿತರ ತಂತ್ರಜ್ಞಾನ ಸಂಬಂಧಿ ಕೌಶಲಗಳಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ.