alex Certify HMP ವೈರಸ್ ಅಬ್ಬರ: ರೋಗ ಲಕ್ಷಣ, ಹರಡುವಿಕೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

HMP ವೈರಸ್ ಅಬ್ಬರ: ರೋಗ ಲಕ್ಷಣ, ಹರಡುವಿಕೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಹ್ಯೂಮನ್ ಮೆಟ್ಪಾ ನ್ಯೂಮೋ ವೈರಸ್(ಹೆಚ್.ಎಂ.ಪಿ.ವಿ) ಕುರಿತು ಸಾರ್ವಜನಿಕರಿಗೆ ಆಂತಕ ಬೇಡ ಮುನ್ನೆಚ್ಚರಿಕೆ ವಹಿಸಬೇಕಿದೆ.

ಹೆಚ್‍ಎಂಪಿವಿ ವೈರಾಣು ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಬೇಕು: ಉಸಿರಾಟದ ಸಮಸ್ಯೆ ವೈರಸ್‍ಗಳಂತೆಯೆ ಚಳಿಗಾಲದಲ್ಲಿ ಶೀತ ಮತ್ತು ಜ್ವರ ತರಹದ ರೋಗಲಕ್ಷಣಗಳನ್ನು ವಿಶೇಷವಾಗಿ ಕಿರಿಯ ಮತ್ತು ಹಿರಿಯ ವಯಸ್ಸಿನವರಲ್ಲಿ ಉಂಟುಮಾಡುತ್ತದೆ. ಬೆಂಗಳೂರಿನ ಖಾಸಗಿ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಪರೀಕ್ಷೆಯ ಸಮಯದಲ್ಲಿ ಎರಡು ಹೆಚ್.ಎಂ.ಪಿ.ವಿ. ಸೋಂಕಿತ ಪ್ರಕರಣಗಳು ಧೃಡಪಟ್ಟಿವೆ. 1 ಪ್ರಕರಣವನ್ನು ಈಗಾಗಲೇ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಮತ್ತು ಇತರೆ ಪ್ರಕರಣಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಈ ಎರಡೂ ಪ್ರಕರಣಗಳು ಸೌಮ್ಯ ಸ್ವಭಾವದವು ಮತ್ತು ಯಾವುದೇ ಅಂತರಾಷ್ಟ್ರೀಯ ಪ್ರಯಾಣ ಇತಿಹಾಸವನ್ನು ಹೊಂದಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದಲ್ಲಿ ಸಾಮಾನ್ಯ ಶೀತಜ್ವರ ತರಹದ ಸಾಮಾನ್ಯ ಮತ್ತು ತೀವ್ರತರಹದ ಸೋಂಕಿನಂತಹ ಚಾಲ್ತಿಯಲ್ಲಿರುವ ಉಸಿರಾಟದ ಸೋಂಕುಗಳ ಡೇಟಾವನ್ನು ವಿಶ್ಲೇಷಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರ ಡಿಸೆಂಬರ್‍ನಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿಲ್ಲ.

ರೋಗಲಕ್ಷಣಗಳು: ಹೆಚ್.ಎಂ.ಪಿ.ವಿ. ಕೆಮ್ಮು, ಜ್ವರ, ಮೂಗು ಕಟ್ಟುವಿಕೆ ಮತ್ತು ಉಸಿರಾಟದ ತೊಂದರೆ ಸೇರಿದಂತೆ ಜ್ವರ ತರಹದ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ. ಹೆಚ್ಚು ತೀವ್ರತರವಾದ ಪ್ರಕರಣಗಳಲ್ಲಿ ಇದು ಶ್ವಾಸನಾಳ ಮತ್ತು -ಶ್ವಾಸಕೋಶದ ಸೋಂಕಿಗೆ ಕಾರಣವಾಗಬಹುದು. ವಿಶೇಷವಾಗಿ ಇದು ಚಿಕ್ಕಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಹೊಂದಿರದ ವ್ಯಕ್ತಿಗಳಲ್ಲಿ ಕಂಡು ಬರುತ್ತದೆ.

ಹರಡುವಿಕೆ: ಉಸಿರಾಟದ ಹನಿಗಳು, ನಿಕಟ ವೈಯಕ್ತಿಕ ಸಂಪರ್ಕ ಮತ್ತು ವೈರಸ್‍ನಿಂದ ಕಲುಷಿತಗೊಂಡ ಮೈಕೈ ಸ್ಪರ್ಶಿಸಿದ ನಂತರಬಾಯಿ, ಮೂಗು ಅಥವಾ ಕಣ್ಣುಗಳನ್ನು ಮುಟ್ಟಿದರೆ ಹರಡಬಹುದು.

ಭಾರತದಲ್ಲಿ ಪ್ರಸ್ತುತ ಸ್ಥಿತಿ:- ಭಾರತ ಸರ್ಕಾರ ಮತ್ತು ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಇತ್ತೀಚಿನ ಮಾಹಿತಿಯಂತೆ ದೇಶದಲ್ಲಿ ಹೆಚ್.ಎಂ.ಪಿ.ವಿ. ಪ್ರಕರಣಗಳಲ್ಲಿ ಯಾವುದೇ ಗಣನೀಯ ಏರಿಕೆ ಕಂಡುಬಂದಿಲ್ಲ. ಎಚ್ಚರಿಕೆಗೆ ಯಾವುದೇ ಕಾರಣವಿಲ್ಲ. ಆದರೆ ತಡೆಗಟ್ಟುವ ಕ್ರಮಗಳನ್ನು ಶಿಫಾರಸ್ಸು ಮಾಡಲಾಗಿದೆ.

ಮುಂಜಾಗ್ರತಾ ಕ್ರಮ: ಸಾರ್ವಜನಿಕರು ಮುಂಜಾಗ್ರತಾ ನೈರ್ಮಲ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿನ್ಯೂಪೇಪರ್ ನಿಂದ ಮುಚ್ಚಿಕೊಳ್ಳಿ.  ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‍ನಿಂದ ಹೆಚ್ಚಾಗಿ ತೊಳೆಯಿರಿ.  ಹರಡುವಿಕೆಯನ್ನು ಕಡಿಮೆ ಮಾಡಲು ಎಲ್ಲಾ ಒಳ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಗಾಳಿಯೊಂದಿಗೆ ಸಾಕಷ್ಟು ವಾತಾವರಣವನ್ನು ಶಿಫಾರಸ್ಸು ಮಾಡಲಾಗಿದ್ದು, ನೀವು ಫ್ಲೊ, ಐ.ಎಲ್.ಐ.ನ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.  ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ರಾಜ್ಯ ಆರೋಗ್ಯ ಇಲಾಖೆ  ಸಮನ್ವಯದಿಂದ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು ಇದಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...