ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಳ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಬಸ್ ಗಳ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸಲಾಗುವ ಬಸ್ ಗಳ ಬಾಡಿಗೆ ದರವನ್ನು ಶೇ. 15 ರಷ್ಟು ಹೆಚ್ಚಳ ಮಾಡಿ ಕೆಎಸ್ಆರ್ಟಿಸಿ ಆದೇಶಿಸಿದೆ.
ಪ್ರತಿ ಕಿಲೋಮಿಟರ್ ದರದ ಮೇಲೆ ಶೇಕಡ 15 ರಷ್ಟು ಬಾಡಿಗೆ ದರ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಸಾರಿಗೆ, ಅಶ್ವಮೇಧ, ಮಿನಿ ಬಸ್, ಪಲ್ಲಕ್ಕಿ ಸೇರಿದಂತೆ 16 ಬಗೆಯ ಬಸ್ ಗಳ ಬಾಡಿಗೆದರ ಹೆಚ್ಚಳ ಮಾಡಲಾಗಿದೆ.
ಐರಾವತ, ಅಂಬಾರಿ ಸೇವೆ ಇತರೆ ಎಸಿ ಬಸ್ ಗಳಿಗೆ ಜಿಎಸ್ಟಿ ಸೇರಿ ದರ ಪರಿಷ್ಕರಣೆ ಮಾಡಲಾಗಿದ್ದು, ಜನವರಿ 8 ರಿಂದ ನೂತನ ದರ ಅನ್ವಯವಾಗುತ್ತದೆ. ಈಗಾಗಲೇ ಬುಕಿಂಗ್ ಮಾಡಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರ ವಿಧಿಸಲು ಕೆಎಸ್ಆರ್ಟಿಸಿ ನಿರ್ದೇಶಕರು ಆದೇಶಿಸಿದ್ದಾರೆ.