ನವದೆಹಲಿ: ದೆಹಲಿಯಲ್ಲಿರುವ ಇಂಡಿಯಾ ಗೇಟ್ ಹೆಸರನ್ನು ಭಾರತ ಮಾತಾ ದ್ವಾರ ಎಂದು ಮರುನಾಮಕರಣ ಮಾಡುವಂತೆ ಆಗ್ರಹಿಸಲಾಗಿದೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇಂಡಿಯಾ ಗೇಟ್ ಗೆ ಭಾರತ ಮಾತಾ ದ್ವಾರ ಎಂದು ನಾಮಕರಣ ಮಾಡುವುದರಿಂದ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಸಾವಿರಾರು ದೇಶಭಕ್ತರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಈ ನಿಟ್ಟಿನಲ್ಲಿ ಇಂಡಿಯಾ ಗೇಟ್ ಹೆಸರು ಬದಲಿಸಿ ಭಾರತ ಮಾತಾ ದ್ವಾರ ಎಂದು ಮರು ನಾಮಕರಣ ಮಾಡುವಂತೆ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.
ಅನೇಕ ತಾಣಗಳನ್ನು ಮರು ನಾಮಕರಣ ಮಾಡುವ ಮೂಲಕ ಭಾರತದ ಸಂಸ್ಕೃತಿಯನ್ನು ಸಂಪರ್ಕಿಸುವಲ್ಲಿ ಪ್ರಧಾನಿಯವರ ಪಾತ್ರವನ್ನು ಶ್ಲಾಘಿಸಿದ ಅವರು, ಮೊಘಲ್ ಔರಂಗಜೇಬ್ ಹೆಸರನ್ನು ಎಪಿಜೆ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಿದ್ದೀರಿ, ಇಂಡಿಯಾ ಗೇಟ್‌ನಿಂದ ಕಿಂಗ್ ಜಾರ್ಜ್ V ರ ಪ್ರತಿಮೆಯನ್ನು ತೆಗೆದು ಅದನ್ನು ಬದಲಾಯಿಸಿದ್ದೀರಿ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಮತ್ತು ರಾಜಪಥವನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡುವ ಮೂಲಕ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯಲಾಗಿದೆ. ಅದೇ ರೀತಿ ಇಂಡಿಯಾ ಗೇಟ್ ಹೆಸರನ್ನು ಭಾರತ್ ಮಾತಾ ದ್ವಾರ ಎಂದು ಬದಲಾಯಿಸನೇಕೆಂದು ವಿನಂತಿಸಿದ್ದಾರೆ.
BJP Minority Wing’s national chief Jamal Siddiqui writes to Prime Minister Narendra Modi, requesting that India Gate in Delhi be renamed as Bharat Mata Dwar.
(Source of the letter: Jamal Siddiqui) pic.twitter.com/RDmA1wSch7
— ANI (@ANI) January 6, 2025