ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ(NHAI) 2025ರ ಹಣಕಾಸು ವರ್ಷದಲ್ಲಿ 56 ಸಾವಿರ ಕೋಟಿ ರೂಪಾಯಿ ಸಾಲವನ್ನು ಅವಧಿಗೆ ಮೊದಲೇ ತೀರಿಸಿದೆ. ಈ ಮೂಲಕ ಪ್ರಾಧಿಕಾರ ಬಡ್ಡಿ ರೂಪದಲ್ಲಿ ಪಾವತಿ ಮಾಡಬೇಕಿದ್ದ 1200 ಕೋಟಿ ರೂಪಾಯಿ ಉಳಿತಾಯವಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಒಟ್ಟು ಸಾಲ 3.35 ಲಕ್ಷ ಕೋಟಿ ರೂ. ಆಗಿತ್ತು. ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಇದು 2.56 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ರಾಷ್ಟ್ರೀಯ ಸಣ್ಣ ಉಳಿತಾಯ ಫಂಡ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಾಲ ಪಾವತಿಸಲಾಗಿದೆ. ಇವೆರಡು ಸಂಸ್ಥೆಗಳು ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತವೆ. ಹೀಗಾಗಿ ಇವುಗಳಿಗೆ ಸಾಲ ಪಾವತಿಸಲಾಗಿದ್ದು, 1200 ಕೋಟಿ ರೂ. ಬಡ್ಡಿ ಹಣ ಉಳಿತಾಯವಾಗಿದೆ ಎಂದು ಹೇಳಲಾಗಿದೆ.