ಭುವನೇಶ್ವರ: ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬಿಜೆಪಿ ಮುಖಂಡರು ಸಾವನ್ನಪ್ಪಿರ್ವ ಘಟನೆ ಒಡಿಶಾದ ಸಂಬಲ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಕಾರಿನಲ್ಲಿದ್ದ ದೇಬೇಂದ್ರ ನಾಯಕ್ ಹಾಗೂ ಮುರಳೀಧರ್ ಚುರಿಯಾ ಮೃತ ದುರ್ದೌವಿಗಳು. ದೇಬೇಂದ್ರ ನಾಯಕ್ ಬಿಜೆಪಿಯ ಗೋಶಾಲಾ ಮಂಡಲ ಅಧ್ಯಕ್ಷರಾಗಿದ್ದಾರೆ. ಮುರಳೀಧರ್ ಚುರಿಯಾ ಮಾಜಿ ಸರಪಂಚ್ ಆಗಿದ್ದರು. ಬಿಜೆಪಿಯ ಹಿರಿಯ ನಯಕಿ ನೌರಿ ನಾಯ್ಕ್ ಗೆ ಇಬ್ಬರೂ ಆಪ್ತರಾಗಿದ್ದರು ಎಂದು ತಿಳಿದುಬಂದಿದೆ.
ಕಾರಿನಲ್ಲಿ ಚಾಲಕ ಸೇರಿ 6 ಜನರಿದ್ದರು. ಭುವನೇಶ್ವರದಿಂದ ಕಾರ್ಡೋಲಾದಲ್ಲಿ ಮನೆಗೆ ಎರಳುತ್ತಿದ್ದ ವೇಳೆ ಟ್ರಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಈ ದುರಂತ ನಡೆದಿದೆ.