ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನದಿಗೆ ದನದ ತ್ಯಾಜ್ಯ ಎಸೆದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಚಾರ್ಮಾಡಿ ಘಾಟ್ ಮೃತ್ಯುಂಜಯ ನದಿಗೆ ದನದ ತ್ಯಾಜ್ಯ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಮ್ಮದ್ ಇರ್ಷಾದ್(28) ಮತ್ತು ಮಹಮ್ಮದ್ ಅಜ್ಮಲ್(30) ಬಂಧಿತ ಆರೋಪಿಗಳು. ನೇತ್ರಾವತಿಯ ಉಪನದಿಯಾದ ಮೃಂತ್ಯುಂಜಯ ನದಿಗೆ ದನದ ಕತ್ತರಿಸಿದ ತಲೆ ಸೇರಿ ಇತರೆ ತ್ಯಾಜ್ಯ ಎಸೆದಿದ್ದರು. ಈ ಬಗ್ಗೆ ಸ್ತಳೀಯರು, ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.