ಬೆಂಗಳೂರು: ತೆರಿಗೆ ಪಾವತಿಸದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ.
ಬಿಬಿಎಂಪಿ ಮಾದರಿಯಲ್ಲಿ ರಾಜ್ಯದ ಉಳಿದ ಪೌರ ಸಂಸ್ಥೆಗಳಲ್ಲಿಯೂ ಬಿ ಖಾತಾ ಸಮಸ್ಯೆ ಬಗೆಹರಿಸಲು ಕಾಯ್ದೆಗೆ ಬದಲಾವಣೆ ಮಾಡಲಾಗಿದ್ದು, ಇದಕ್ಕೆ ತಕ್ಕಂತೆ ನಿಯಮಾವಳಿ ರೂಪಿಸಲಾಗುತ್ತಿದೆ. ಆಸ್ತಿ ತೆರಿಗೆ ಪರಿಷ್ಕರಿಸಿ ಅನಧಿಕೃತ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದಾಗ ಪೌರ ಸಂಸ್ಥೆಗಳು ಸಶಕ್ತವಾಗುತ್ತದೆ. ಇದರಿಂದ ನಗರ ಹಾಗೂ ಪಟ್ಟಣಗಳಿಗೆ ಮೂಲಸೌಕರ್ಯ ಒದಗಿಸಬಹುದಾಗಿದೆ.
ನಿಯಮಾವಳಿ ಪ್ರಕಾರ, ಆಸ್ತಿಗಳ ಮೇಲಿನ ಆಸ್ತಿ ತೆರಿಗೆ, ಸೆಸ್ ದಂಡ ಪಾವತಿಸದ ಪಾವತಿಸದವರು ಬಾಕಿದಾರ ಎಂದು ಪರಿಗಣಿಸಲ್ಪಡುತ್ತಾರೆ. ಅವರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು. ನಂತರ ಆಸ್ತಿಗಳ ಪರಿಶೀಲನೆ ನಡೆಸಲಾಗುವುದು. ವಸೂಲಿ ನಿಯಮಗಳ ಪ್ರಕಾರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿ ನೋಟಿಸ್ ನೀಡಿ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ನೋಟಿಸ್ ವಿರುದ್ಧ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ಹೋಗಲು ಶೇಕಡ 50ರಷ್ಟು ತೆರಿಗೆ ಪಾವತಿ ಕಡ್ಡಾಯವಾಗಿದ್ದು, ಜಪ್ತಿ ಮಾಡಲಾದ ಆಸ್ತಿ ಮಾರಾಟ ಹರಾಜಿಗೂ ಅವಕಾಶವಿದೆ ಎಂದು ಹೇಳಲಾಗಿದೆ.