alex Certify BIG NEWS : ದಟ್ಟ ಮಂಜು ಹಿನ್ನೆಲೆ 200 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ, ರೈಲುಗಳ ಸಂಚಾರಕ್ಕೂ ಭಾರಿ ಅಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ದಟ್ಟ ಮಂಜು ಹಿನ್ನೆಲೆ 200 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ, ರೈಲುಗಳ ಸಂಚಾರಕ್ಕೂ ಭಾರಿ ಅಡ್ಡಿ

ದಟ್ಟವಾದ ಮಂಜು ಕವಿದ ವಾತಾವರಣ ಹಾಗೂ ತಾಪಮಾನ ಕುಸಿತವಾಗಿರುವ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಹಾಗೂ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವುಂಟಾಗಿದೆ.

ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಮಂಜು ಕವಿದವಾತಾವರಣವಿದ್ದು, ಗೋಚರತೆ ಸ್ಪಷ್ಟವಾಗಿಲ್ಲದ ಕಾರಣಕ್ಕೆ ದೆಹಲಿ, ಲಖನೌ, ಅಮೃತಸರ, ಶ್ರೀನಗರ, ಗುವಾಹಟಿ ಸೇರಿದಂತೆ ಹಲವು ನಗರಗಳಲ್ಲಿ 200 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಶೂನ್ಯಕ್ಕೆ ಇಳಿದಿದೆ. ಅಷ್ಟರಮಟ್ಟಿಗೆ ದಟ್ಟ ಮಂಜು ಕವಿದಿದ್ದು, ವಿಮಾನ ಹಾರಾಟಕ್ಕೆ ಅಡ್ದಿಯುಂಟಾಗಿದೆ. ಈ ಹಿನ್ನೆಲೆಯಲ್ಲಿ 202 ವಿಮಾನಗಳ ಹಾರಟದಲ್ಲಿ ವಿಳಂಬವಾಗಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಂದಾಗಿ ದೇಶದ ವಿವಿಧ ನಗರಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳ ಹಾರಾಟದಲ್ಲಿಯೂ ವ್ಯತ್ಯಯವಾಗಿದೆ.

ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ದೆಹಲಿಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವಿದ್ದು, ಸಾಮನಯಕ್ಕಿಂತ 3 ಡಿಗ್ರಿಗಳಷ್ಟು ಕಡಿಮೆಯಾಗಿದೆ ಕನಿಷ್ಠ ತಾಪಮಾನ 7.6 ಸೆಲ್ಸಿಯಸ್ ಇದೆ.

ಹವಾಮಾನ ವೈಪರೀತ್ಯದಿಂದಾಗಿ ದ್ದೆಹಲಿಯಿಂದ ಹೊರಡಬೇಕಿದ್ದ 24 ರೈಲುಗಳ ಸಂಚಾರದಲ್ಲಿಯೂ ಅಡ್ಡಿಯುಂಟಾಗಿದೆ. ಅಯೋಧ್ಯೆ ಎಕ್ಸ್ ಪ್ರೆಸ್ ನಾಲ್ಕು ಗಂಟೆ ವಿಳಂಬವಾಗಿ ಸಂಚರಿಸಿದೆ. ಗೋರಖ್ ಧಾಮ್ ಎಕ್ಸ್ ಪ್ರೆಸ್ ಎರಡು ಗಂಟೆ ಗೂ ಅಧಿಕ ವಿಳಂಬವಾಗಿದೆ. ಬಿಹಾರ ಕ್ರಾಂತಿ ಎಕ್ಸ್ ಪ್ರೆಸ್ ರೈಲು, ಶ್ರಮ ಶಕ್ತಿ ಎಕ್ಸ್ ಪ್ರೆಸ್ ರೈಲು ಸಂಚಾರದಲ್ಲಿಯೂ ತಡವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...