ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಇನ್ನು ಎಲ್ಲರಿಗೂ ಯುಪಿಐ ಪಾವತಿ ಸೌಲಭ್ಯ

ನವದೆಹಲಿ: ಇನ್ನು ವಾಟ್ಸಾಪ್ ತಂತ್ರಾಂಶದ ಎಲ್ಲಾ ಬಳಕೆದಾರರು ಅದರಲ್ಲಿರುವ ಯುಪಿಐ ಪಾವತಿ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.

ಭಾರತ ರಾಷ್ಟ್ರೀಯ ಪಾವತಿ ಪ್ರಾಧಿಕಾರ(ಎನ್‌ಸಿಪಿಐ) ಈ ಕುರಿತಾಗಿ ಇದ್ದ ಮಿತಿಯನ್ನು ತೆರವು ಮಾಡಿದೆ. ಇದುವರೆಗೂ ಕೇವಲ 10 ಕೋಟಿ ಬಳಕೆದಾರರಿಗೆ ವಾಟ್ಸಾಪ್ ಪೇಮೆಂಟ್ ಬಳಕೆಗೆ ಅನುಮತಿಸಲಾಗಿತ್ತು. ಗರಿಷ್ಠ ಮಿತಿಯನ್ನು ತೆರವುಗೊಳಿಸಲಾಗಿದ್ದು, ವಾಟ್ಸಾಪ್ ತನ್ನ ಯುಪಿಐ ಪಾವತಿ ಸೇವೆಯನ್ನು ಎಲ್ಲಾ ಬಳಕೆದಾರರಿಗೂ ವಿಸ್ತರಿಸಬಹುದಾಗಿದೆ.

ಆದರೆ ಈ ಸೇವೆ ನೀಡುವಾಗ ಅನ್ವಯವಾಗುವ ಹಾಲಿ ಯುಪಿಐ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಭಾರತ ರಾಷ್ಟ್ರೀಯ ಪಾವತಿ ಪ್ರಾಧಿಕಾರ ಸೂಚನೆ ನೀಡಿದೆ.

ಈ ಬೆಳವಣಿಗೆಯೊಂದಿಗೆ, WhatsApp Pay ಈಗ UPI ಸೇವೆಗಳನ್ನು ತನ್ನ ಸಂಪೂರ್ಣ ಬಳಕೆದಾರರಿಗೆ ವಿಸ್ತರಿಸಬಹುದು. ಈ ಹಿಂದೆ, NPCI ತನ್ನ UPI ಬಳಕೆದಾರರ ನೆಲೆಯನ್ನು ಹಂತ ಹಂತವಾಗಿ ವಿಸ್ತರಿಸಲು WhatsApp Pay ಗೆ ಅನುಮತಿ ನೀಡಿತ್ತು ಎಂದು NPCI ಡಿಸೆಂಬರ್ 31 ರಂದು ಹೇಳಿಕೆಯಲ್ಲಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read