ಶರತ್ ಎಸ್ ನಿರ್ದೇಶನದ ಅರ್ಜುನ್ ಅಭಿನಯದ ಚಿತ್ರದ ‘ಖತರ್ನಾಕ್ ಗ್ಯಾಂಗ್ ಸ್ಟರ್’ ಎಂಬ ವಿಡಿಯೋ ಹಾಡನ್ನು ನಿನ್ನೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂಜಯ್ ಈ ಹಾಡಿಗೆ ಧ್ವನಿಯಾಗುವ ಮೂಲಕ ಸಾಹಿತ್ಯ ಬರೆದಿದ್ದು, ಶಶಿಕುಮಾರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಈ ಚಿತ್ರವನ್ನು ದ್ರೋಣ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಎಚ್ ಆರ್ ನಟರಾಜ್ ನಿರ್ಮಾಣ ಮಾಡಿದ್ದು, ಅರ್ಜುನ್ ಸೇರಿದಂತೆ ಯಶವಿಕಾ ನಿಷ್ಕಲಾ, ಕಿಶೋರ್, ಅವಿನಾಶ್, ಶೋಭರಾಜ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್ ತೆರೆ ಹಂಚಿಕೊಂಡಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ಆರ್ ಜನಾರ್ಧನ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿದೆ.