ಬೀಜಿಂಗ್: ವಿಶ್ವದಲ್ಲೇ ಅತಿ ವೇಗದ ಬುಲೆಟ್ ರೈಲು ಎಂಬ ಹೆಗ್ಗಳಿಕೆಯ ಸಿಆರ್ 450 ಪ್ರೋಟೋಟೈಪ್ ಅನ್ನು ಚೀನಾ ಪ್ರದರ್ಶಿಸಿದೆ.
ಚೀನಾ ಸ್ಟೇಟ್ ರೈಲ್ವೆ ಗ್ರೂಪ್ ಕಂಪನಿ ಅಭಿವೃದ್ಧಿಪಡಿಸಿರುವ ಸಿಆರ್ 450 ರೈಲಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ಗಂಟೆಗೆ 450 ಕಿಲೋಮೀಟರ್ ಗರಿಷ್ಠ ವೇಗವಾಗಿ ರೈಲು ಸಂಚರಿಸಿದೆ.
ಈ ನಡುವೆ ರೈಲಿನ ಇಂಧನ ಬಳಕೆ, ಆಂತರಿಕ ಸದ್ದು, ಬ್ರೇಕಿಂಗ್, ದೂರದಂತಹ ಅನೇಕ ಮಹತ್ವದ ಅಂಶಗಳ ಕುರಿತು ರೈಲ್ವೆ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಈ ಅಂಶಗಳ ಆಧಾರದಲ್ಲಿ ರೈಲನ್ನು ಮತ್ತಷ್ಟು ಪ್ರಯಾಣ ಸ್ನೇಹಿಯಾಗಿಸಲು ವಿಜ್ಞಾನಿಗಳು ಗಮನಹರಿಸುವರು.
ಸದ್ಯ ಚೀನಾದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗೆ ಬಳಸಲಾಗುತ್ತಿರುವ ಸಿಆರ್ 400 ಫಾಕ್ಸಿಂಗ್ ಹೈಸ್ಪೀಡ್ ರೈಲು ಗಂಟೆಗೆ 350 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸುತ್ತಿದೆ. ಚೀನಾದಲ್ಲಿ ಹೈಸ್ಪೀಡ್ ಬುಲೆಟ್ ರೈಲುಗಳು ಇದುವರೆಗೆ 47 ಸಾವಿರ ಕಿಲೋಮೀಟರ್ ಕ್ರಮಿಸಿದೆ. ಹೈಸ್ಪೀಡ್ ಬುಲೆಟ್ ರೈಲಿನ ಹೊಸ ಮಾದರಿಯನ್ನು ಭಾನುವಾರ ಚೀನಾ ಅನಾವರಣಗೊಳಿಸಿದ್ದು, ಪ್ರಾಯೋಗಿಕ ಪರೀಕ್ಷೆಯ 450 ಕಿಮೀ ಸಂಚರಿಸಿದೆ. ವೇಳೆ ಈ ಮೂಲಕ ವಿಶ್ವದ ಅತ್ಯಂತ ವೇಗದ ರೈಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.