ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಬೈಲಕುಪ್ಪೆಗೆ ಜನವರಿ 5 ರಂದು ಟಿಬೆಟ್ ಧರ್ಮ ಗುರು ದಲೈಲಾಮ ವಿಶ್ರಾಂತಿಗಾಗಿ ಆಗಮಿಸಲಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಿಪುರ ಟಿಬೇಟನ್ ಪ್ರಾರ್ಥನಾ ಮಂದಿರದ ತಾಷಿ ಲುಂಪೂ ಮೋನಾಸ್ಟ್ರಿಯಲ್ಲಿ ಒಂದು ತಿಂಗಳ ಕಾಲ ದಲೈಲಾಮ ವಿಶ್ರಾಂತಿ ಪಡೆಯಲಿದ್ದಾರೆ.
ಅವರು ಪ್ರಾರ್ಥನೆಯಲ್ಲಷ್ಟೇ ಟಿಬೆಟಿಯನ್ ಬೌದ್ಧ ಸನ್ಯಾಸಿಗಳೊಂದಿಗೆ ಭಾಗವಹಿಸಲಿದ್ದು, ಸಾರ್ವಜನಿಕ ಸಭೆ, ಸಮಾರಂಭ, ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಅವರ ಆಗಮನದ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.