ಪ್ರದೀಪ್ ದೊಡ್ಡಯ್ಯ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ‘out of ಸಿಲಬಸ್’ ಚಿತ್ರ ನಿನ್ನೆ ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಾಲೇಜ್ ವಿದ್ಯಾರ್ಥಿಗಳ ಕುರಿತ ಈ ಸಿನಿಮಾದಲ್ಲಿ ಯುವ ಕಲಾವಿದ ಪ್ರದೀಪ್ ದೊಡ್ಡಯ್ಯ ಅದ್ಭುತ ನಟನೆ ಮಾಡಿದ್ದು, ಕ್ಲೈಮಾಕ್ಸ್ ಸೀನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಚಿತ್ರವನ್ನು AD6 ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ತನುಷ್ ಎಸ್ ವಿ ದೇಸಾಯಿ ಗೌಡ – ಶ್ರೀಮತಿ. ಕೆ ವಿಜಯಕಲಾ ಸುಧಾಕರ್ ನಿರ್ಮಾಣ ಮಾಡಿದ್ದು, ಪ್ರದೀಪ್ ದೊಡ್ಡಯ್ಯ ಸೇರಿದಂತೆ ರಿತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಚಿತ್ಕಲಾ ಬಿರಾದಾರ್, ಮಂಜು ಪಾವಗಡ, ಬಣ್ಣ ಹಚ್ಚಿದ್ದಾರೆ. ಶ್ರೀಹರಿ ಪ್ರೇಮ್ ಭರತ್, ಪ್ರಜ್ವಲ್ ಎನ್, ಗಿರೀಶ್ ಹೋತೂರ್, ಡಿ. ಶ್ರೀನಿವಾಸ್ ಆಚಾರ್, ಜೋಶ್ವಾ ಶ್ರೀಧರ್ ಸಂಗೀತ ಸಂಯೋಜನೆ ನೀಡಿದ್ದು, ದೇವ್ ವಡ್ಡೆ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನವಿದೆ.