ನಿನ್ನೆ ನಡೆದ ಪ್ರೊ ಕಬಡ್ಡಿ ಎಲಿಮಿನೇಟರ್ ಪಂದ್ಯಗಳಲ್ಲಿ ಯುಪಿ ಯೋಧಾಸ್ ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು ಜಯಭೇರಿ ಆದರೆ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಎದುರು ಪಟ್ನಾ ಪೈರೇಟ್ಸ್ ಜಯ ಸಾಧಿಸಿದೆ. ಈ ಮೂಲಕ ಯುಪಿ ಯೋಧಾಸ್ ಹಾಗೂ ಪಟ್ನಾ ಪೈರೇಟ್ಸ್ ಸೆಮಿ ಫೈನಲ್ ಗೆ ಪ್ರವೇಶ ಪಡೆದಿವೆ.
ಇಂದು ನಡೆಯಲಿರುವ ಮೊದಲ ಸೆಮಿ ಫೈನಲ್ ನಲ್ಲಿ ಯುಪಿ ಯೋಧಾಸ್ ಮತ್ತು ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗುತ್ತಿವೆ. ಯುಪಿ ಯೋಧಾಸ್ ನಲ್ಲಿ ರೈಡರ್ಗಳೇ ಪ್ರಮುಖ ಅಸ್ತ್ರ ವಾಗಿದ್ದರೆ, ಹರಿಯಾಣ ಸ್ಟೀಲರ್ಸ್ ನಲ್ಲಿ ಡಿಫೆಂಡರ್ಸ್ ಗಳದ್ದೇ ಅಬ್ಬರ ಜೋರಾಗಿರುತ್ತದೆ. ಒಟ್ಟಾರೆ ಉಭಯ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದು, ಯಾವ ತಂಡ ಮೇಲುಗೈ ಸಾಧಿಸಲಿದೆ ಕಾದು ನೋಡಬೇಕಾಗಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ಹಾಗೂ ದಬಾಂಗ್ ಡೆಲ್ಲಿ ಸೆಣಸಾಡಲಿವೆ.