ಚಂಡೀಗಢ: ಡಿಸೆಂಬರ್ 30 ರಂದು ಪಂಜಾಬ್ ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಲಾಗಿದೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ರೈತ ಮುಖಂಡರೊಬ್ಬರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸರ್ವಣ್ ಸಿಂಗ್ ಪಂಧೇರ್, ಬಂದ್‌ಗೆ ರಾಜ್ಯಾದ್ಯಂತ ಹಲವಾರು ಸಂಘಗಳು ಮತ್ತು ಗುಂಪುಗಳಿಂದ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಬಂದ್ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಂದು ಪಂಜಾಬ್‌ನಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಮುಚ್ಚಲ್ಪಡುತ್ತವೆ ಮತ್ತು ರೈಲು ಸಂಚಾರ ಮತ್ತು ರಸ್ತೆ ಸಂಚಾರದಲ್ಲಿ ಅಡೆತಡೆಗಳು ಉಂಟಾಗುತ್ತವೆ. ಆದಾಗ್ಯೂ, ತುರ್ತು ಸೇವೆಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದ್ದಾರೆ.
ವರ್ತಕರು, ಸಾಗಣೆದಾರರು, ನೌಕರರ ಸಂಘಗಳು, ಟೋಲ್ ಪ್ಲಾಜಾ ಕಾರ್ಮಿಕರು, ಕಾರ್ಮಿಕರು, ಮಾಜಿ ಸೈನಿಕರು, ಸರಪಂಚರು ಮತ್ತು ಶಿಕ್ಷಕರ ಸಂಘಗಳು, ಸಾಮಾಜಿಕ ಮತ್ತು ಇತರ ಸಂಸ್ಥೆಗಳು ಮತ್ತು ಇತರ ಕೆಲವು ವಿಭಾಗಗಳು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿವೆ. ಜತೆಗೆ ಜನಸಾಮಾನ್ಯರೂ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಬಂದ್ ಕರೆ ನೀಡಲಾಗಿದೆ. ಕಳೆದ ವಾರ ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ‘ಪಂಜಾಬ್ ಬಂದ್’ಗೆ ಕರೆ ನೀಡುವ ನಿರ್ಧಾರವನ್ನು ತೆಗೆದುಕೊಂಡಿವೆ. ಬೆಳೆಗಳಿಗೆ ಎಂಎಸ್‌ಪಿ ಮೇಲೆ ಕಾನೂನು ಖಾತರಿಯ ಜೊತೆಗೆ, ರೈತರು ಸಾಲ ಮನ್ನಾ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರದಲ್ಲಿ ಹೆಚ್ಚಳಕ್ಕೆ ವಿರೋಧ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ “ನ್ಯಾಯ” ಕ್ಕಾಗಿ ಒತ್ತಾಯ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಬಂದ್ ಕರೆ ನೀಡಲಾಗಿದೆ.
#WATCH | Khanauri Border: Farmer leader of Kisan Mazdoor Sanghrash Committee-Punjab, Sarvan Singh Pandher says, “Punjab bandh will be observed on 30th December from 7 am to 4 pm. We have received support from many unions and groups. Both Punjab govt and private offices will… pic.twitter.com/rDTxxNUaMZ
— ANI (@ANI) December 26, 2024