alex Certify BIG NEWS: ಆಸಿಡ್ ಮೊಟ್ಟೆಯಿಂದ ನನ್ನನ್ನು ಕೊಲ್ಲಲು ಯತ್ನ: ಶಾಸಕ ಮುನಿರತ್ನ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಸಿಡ್ ಮೊಟ್ಟೆಯಿಂದ ನನ್ನನ್ನು ಕೊಲ್ಲಲು ಯತ್ನ: ಶಾಸಕ ಮುನಿರತ್ನ ಆರೋಪ

ಬೆಂಗಳೂರು: ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ ಆಸಿಡ್ ಮೊಟ್ಟೆಯಿಂದ ನನ್ನನ್ನು ಕೊಲ್ಲಲು ಯತ್ನ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಮ್ಡಿರುವ ಮುನಿರತ್ನ, ಸತತ ನಾಲ್ಕು ಬಾರಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದೀರಿ ಇದನ್ನು ಸಹಿಸಲಾಗದೆ ವಿರೋಧ ಪಕ್ಷದವರಾದ ಡಿ.ಕೆ.ಶಿವಕುಮಾರ, ಡಿ.ಕೆ.ಸುರೇಶ್, ಹನುಮಂತರಾಯಪ್ಪ ಮತ್ತು ರಾಜ ರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಇವರುಗಳು ಕಾಲ ಕಾಲದಿಂದಲು ನನ್ನ ಮೇಲೆ ಅಸೂಯೆ, ದ್ವೇಷ ಹಾಗೂ ಅಸಹ್ಯದ ರಾಜಕಾರಣವನ್ನು ಮಾಡಿಕೊಂಡು ಬಂದಿರುತ್ತಾರೆ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸೋತು ಬಿ.ಜೆ.ಪಿ ಪಕ್ಷವು ಗೆಲುವು ಸಾಧಿಸುವಲ್ಲಿ ನನ್ನ ಪಾತ್ರವು ಮುಖ್ಯವಾಗಿರುವದರಿಂದ ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲೆ ಮಾಡಿ ಸರ್ಕಾರದ ಅಧಿಕಾರವನ್ನು ದುರ್ಭಳಕೆ ಮಾಡಿಕೊಂಡು ನನ್ನನ್ನು ಜೈಲಿಗೆ ಕಳಿಹಿಸಿರುತ್ತಾರೆ. ಇಷ್ಟಾದರೂ ಸಹ ನಾನು ಕುಗ್ಗದೆ ಕ್ಷೇತ್ರದ ಜನಗಳ ಹಿತಕ್ಕಾಗಿ ಕುಂದು ಕೊರತೆಗಳನ್ನು ಆಲಿಸಲು ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ವರ್ಷದ ಜನ್ಮದಿನವನ್ನು ಆಚರಿಸಲು ವಾರ್ಡ್ ನಂ 42 ಲಕ್ಷ್ಮೀದೇವಿ ನಗರಕ್ಕೆ ಭೇಟಿಕೊಟ್ಟಾಗ ಯಾವುದೋ ಒಬ್ಬ ಅಪರಿಚಿತ ವ್ಯಕ್ತಿ ನನ್ನ ಮೇಲೆ ಮೊಟ್ಟೆ ದಾಳಿ ಮಾಡಿ ನಂತರ ನನ್ನನ್ನು ಆ್ಯಸಿಡ್ ಮೊಟ್ಟೆಯಿಂದ ಕೊಲ್ಲಲು ಪ್ರಯತ್ನ ಪಡುವ ವೇಳೆ ಸ್ಥಳೀಯ ಆರಕ್ಷರು ನನ್ನನ್ನು ರಕ್ಷಣೆ ಮಾಡಿದರು ಎಂದು ತಿಳಿಸಿದ್ದಾರೆ.

ನನ್ನ ಕಾರ್ಯಕರ್ತರ ಮೇಲೆಯೂ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿ ಜೈ ಡಿ.ಕೆ.ಶಿವಕುಮಾರ್ ಜೈ ಡಿ.ಕೆ.ಸುರೇಶ್ ಎಂದು ಕೂಗಿಕೊಂಡು ಹೋಗಿರುತ್ತಾರೆ. ಇವರುಗಳು ಇನ್ನೂ ಈ ರೀತಿಯ ದ್ವೇಷ ,ಅಸೂಯೆ ಮತ್ತು ಅಸಹ್ಯ ರಾಜಕಾರಣವನ್ನು ನಡೆಸಿದರೂ ಸಹ ನಾನು ಕುಗ್ಗುವುದಿಲ್ಲ ನನಗೆ ಮತ ಭಿಕ್ಷೆ ನೀಡಿದಂತಹ ಕ್ಷೇತ್ರದ ಮತದಾರರ ಸೇವೆಯನ್ನು ಎಂದಿಗೂ ನಿಲ್ಲಿಸುವದಿಲ್ಲ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...