ಕಲಬುರಗಿ : ಕರೆಂಟ್ ಶಾಕ್ ತಗುಲಿ ತಾಯಿ-ಹಾಗೂ ಮಗ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿಯಲ್ಲಿ ಇತ್ತೀಚೆಗೆ ನಡೆದಿದ್ದು, ಘಟನೆಯ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ಹೌದು. ಮಗನಿಗೆ ಶಾಲಾ ಬಸ್ ಹತ್ತಲು ಸಹಾಯ ಮಾಡುತ್ತಿದ್ದ 34 ವರ್ಷದ ಮಹಿಳೆ ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಸೋಮವಾರ ಬೆಳಿಗ್ಗೆ ನಡೆದಿದ್ದು, ಭಾಗ್ಯಶ್ರೀ ಎಂಬ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದಾರೆ. ಘಟನೆಯಲ್ಲಿ ಆಕೆಯ ಮಗನಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.
ಸಿಸಿಟಿವಿ ದೃಶ್ಯಾವಳಿಗಳು ಭಾಗ್ಯಶ್ರೀ ತನ್ನ ಮಗನೊಂದಿಗೆ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವುದನ್ನು ತೋರಿಸುತ್ತದೆ. ಬೆಳಿಗ್ಗೆ 9:21 ಕ್ಕೆ ಶಾಲಾ ಬಸ್ ಬರುತ್ತಿದ್ದಂತೆ, ಅವಳು ತನ್ನ ಮಗನ ಜೊತೆ ಬಸ್ ಬಳಿ ಬಂದಿದ್ದಾಳೆ. ಮಗನನ್ನು ಬಸ್ ಹತ್ತಿಸಲು ಮುಂದಾಗುತ್ತಿದ್ದಂತೆ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕೆ ತುಳಿದಿದ್ದಾಳೆ.
ಕೆಲವು ಕ್ಷಣಗಳ ನಂತರ ಆಕೆಯ ದೇಹದಿಂದ ಕಿಡಿಗಳು ಬಂದಿದ್ದು, ಕೆಳಗೆ ಕುಸಿದುಬಿದ್ದಿದ್ದಾಳೆ. ವರದಿಯ ಪ್ರಕಾರ, ಜನರು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರೂ ಪ್ರಬಲ ಕಿಡಿಗಳು ಬರುತ್ತಿದ್ದಂತೆ ಹೆದರಿ ಹಿಂದೆ ಸರಿಯುತ್ತಿದ್ದಾರೆ. ಬಳಿಕ ಭಾಗ್ಯಶ್ರೀ ಮತ್ತು ಅವರ ಮಗನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಹಿಳೆಯ ಕೈ ಮತ್ತು ಹೊಟ್ಟೆಗೆ ಗಾಯಗಳಾಗಿವೆ. ಬಸ್ ನಿಲ್ದಾಣದ ಬಳಿ ನೇತಾಡುತ್ತಿದ್ದ ಲೈವ್ ವಿದ್ಯುತ್ ಕೇಬಲ್ ನಿಂದಾಗಿ ವಿದ್ಯುತ್ ಆಘಾತ ಸಂಭವಿಸಿದೆ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
Negligence Strikes Again: Kalaburagi Woman Critically Injured
1. Tragic Accident: A live wire fell on a school bus for children with intellectual disabilities near Mohan Lodge.
2. Woman Severely Burned: Bhagyashree suffered critical injuries while helping her child board the… pic.twitter.com/EHdNmbnLZu
— Sneha Mordani (@snehamordani) December 24, 2024