ಬೆಳಗಾವಿ: ಪತ್ನಿಯ ಮೇಲೆ ಅನುಮಾನಗೊಂಡ ಪತಿ ಆಕೆಯ ಮಾಜಿ ಪ್ರಿಯಕರನ ಮೇಲೆ ಕುಡುಗೋಲಿನಿಂದ 24 ಬಾರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನಡೆದಿದೆ.
ಮುತ್ತು ಗಣಾಚಾರಿ ಎಂಬಾತ ತನ್ನ ಪತ್ನಿಯ ಮಾಜಿ ಪ್ರಿಯಕರ ಮಕ್ತುಮ್ ಎಂಬಾತನನ್ನು ಹಯೆಗೆ ಯತ್ನಿಸಿದ್ದಾನೆ. 24 ಬಾರಿ ಹಲ್ಲೆ ನಡೆಸಿದ್ದು, ಆದಾಗ್ಯೂ ಮಕ್ತುಮ್ ಬದುಕುಳಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಕ್ತುಮ್ ನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ತುಮ್ ಅರವಳ್ಳಿ ಗ್ರಾಮದವನು. ಗಣಾಚಾರಿ ಪತ್ನಿ ಜೊತೆ ಮಕ್ತುಮ್ ಸಂಪರ್ಕದಲ್ಲಿ ಇದ್ದನಂತೆ. ಇದೇ ವಿಚಾರವಾಗಿ ಪತಿ ಹಾಗೂ ಪತ್ನಿ ನಡುವೆ ಗಲಾಟೆಯಾಗಿದೆ. ಜಗಳದಿಂದ ನೊಂದ ಗಣಾಚಾರಿ ಪತ್ನಿ ತವರು ಮನೆ ಸೇರಿದ್ದಳು.
ಈ ವಿಚಾರವಾಗಿ ಮಕ್ತುಮ್ ಗಣಾಚಾರಿಯನ್ನು ರೇಗಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಗಣಾಚಾರಿ ಸಂತೆಗೆ ಬಂದಿದ್ದ ಮಕ್ತುಮ್ ಮೇಲೆ ಕುಡುಗೋಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಕ್ತುಮ್ ಆಸ್ಪತ್ರೆಗೆ ದಾಖಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಎಸ್ಕೇಪ್ ಆಗಿದ್ದ ಆರೋಪಿ ಮುತ್ತು ಗ್ಣಾಚಾರಿಯನ್ನು ಕಿತ್ತೂರು ಪೊಲೀಸರು ಸೋಮವಾರಪೇಟೆಯಲ್ಲಿ ಬಂಧಿಸಿದ್ದಾರೆ.