ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಮಾನುಷ ಘಟನೆ ನಡೆದಿದೆ. ದುಷ್ಕರ್ಮಿಗಳ ಗುಂಪೊಂದು ಹೋಟೆಲ್ ಗೆ ನುಗ್ಗಿ ಯುವಕನ ಕೈ-ಕಾಲು ಕತ್ತರಿಸಿ ಹೋಗಿರುವ ಘಟನೆ ದೇವನಹಳ್ಳಿ ಬಳಿಯ ಸಾದಹಳ್ಳಿ ಗೇಟ್ ಬಳಿ ನಡೆದಿದೆ.
ಬೆಳಿಗ್ಗೆ ಏಕಏಕಿ ಹೋಟೆಲ್ ಗೆ ನುಗ್ಗಿರುವ ಗ್ಯಾಂಗ್, ಮಂಜುನಾಥ್ ಎಂಬ ಯುವಕನ ಮೇಲೆ ಮಾರಣಂತಿಕವಾಗಿ ಹಲ್ಲೆ ನಡೆಸಿದೆ. ಅಲ್ಲದೆ ಮಚ್ಚಿನಿಂದ ಯುವಕನ ಕೈ ಕಟ್ ಮಾಡಿದ್ದಾರೆ. ಕೆಳಗೆ ಬಿದ್ದ ಮಂಜುನಾಥ್ ಮೇಲೆ ಮನಸೋ ಇಚ್ಛೆ ಮಚ್ಚು ಬೀಸಿದ್ದಾರೆ. ಕಾಲುಗಳಿಗೂ ಗಂಭೀರವಾಗಿ ಗಾಯಗಳಾಗಿವೆ.
ದುಷ್ಕರ್ಮಿಗಳ ಅಟ್ಟಹಾಸ ಕಂಡ ಹೋಟೆಲ್ ಸಿಬ್ಬಂದಿ, ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ರಕ್ತದ ಮಡುವಲ್ಲಿ ಬಿದ್ದಿರುವ ಯುವಕ ತನ್ನನ್ನು ಕಾಪಾಡುವಂತೆ ಅಲವೊತ್ತುಕೊಂಡಿದ್ದಾನೆ. ಆಸ್ಪತ್ರೆಗೆ ದಾಖಲಿಸುವಂತೆ ಗೋಗರೆದಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೇ ದ್ವೇಷದ ಕಾರಣಕ್ಕೆ ಮಂಜುನಾಥ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಇಡಾಯಿಸಿ ಪರಿಶೀಲನೆ ನಡೆಸಿದ್ದಾರೆ.