ಬೆಂಗಳೂರು : ಗೋಲ್ಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ಧರ್ಮೇಂದ್ರ ಗೌಡ ಸೇರಿ ಹಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ನಟ ಧರ್ಮೇಂದ್ರ ಗೌಡ ಸೇರಿ ಹಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಹೌದು, ಶ್ವೇತಾ ಗೌಡ ವಂಚನೆ ಪ್ರಕರಣದಲ್ಲಿ ಹಲವರ ಹೆಸರು ಕೇಳಿಬರುತ್ತಿದ್ದು, ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಟ ಧರ್ಮೇಂದ್ರನಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ನಟ ಧರ್ಮೇಂದ್ರ ಹಾಗೂ ಐಶ್ವರ್ಯಾ ಪತಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನ ಆರ್.ಆರ್.ನಗರದ ನಿವಾಸಿ ಐಶ್ವರ್ಯಾ ಗೌಡ ಅಲಿಯಾಸ್ ನವ್ಯಶ್ರೀ ಎಂಬ ಮಹಿಳೆ ತಾನು ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ವರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿ ಮಾಲಕಿ ವನಿತಾ ಐತಾಳ್ ಎಂಬುವವರಿಗೆ 9.14 ಕೋಟಿ ರೂ ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.ಚಿನ್ನದ ಅಂಗಡಿ ಮಾಲಕಿ ವನಿತಾ ಐತಾಳ್ ಐಶ್ವರ್ಯಾಳಿಂದ ಹಣ ವಾಪಸ್ ಕೇಳಿದಾಗ ನಟ ಧರ್ಮೇಂದ್ರನಿಂದ ಕರೆ ಮಾಡಿಸಿ ಕೊಲೆ ಬೆದರಿಕೆಯೊಡ್ಡಲಾಗಿದೆ ಎನ್ನಲಾಗಿದೆ.
9.14 ಕೋಟಿಯ 14 ಕೆಜಿ 660 ಗ್ರಾಂ ಚಿನ್ನ ಪಡೆದು ಐಶ್ವರ್ಯ ಗೌಡ ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ತಾನು ಡಿ.ಕೆ.ಸುರೇಶ್ ಸಹೋದರಿ, ತನಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿ ಹಂತ ಹಂತವಾಗಿ ಚಿನ್ನ ಖರೀದಿಸಿ ವಂಚಿಸಿದ್ದಾಳೆ. ಆರೋಪಿ ಐಶ್ವರ್ಯ ಗೌಡ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.