ನವದೆಹಲಿ: ಕರೆಗಳು ಹಾಗೂ ಕರೆ ಡೇಟಾ ನಿಯಮಗಳನ್ನು ಟೆಲಿಕಾಂ ನಿಯಂತ್ರಕ ಟ್ರಾಯ್ ಬದಲಾಯಿಸಿದೆ. ಕೇವಲ ಕರೆ, ಎಸ್ಎಂಎಸ್ ಪ್ಯಾಕ್ ಸಾಕು ಎನ್ನುವವರಿಗೆ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡಲು ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.
ವಿಶೇಷ ರಿಚಾರ್ಜ್ ಕೂಪನ್ ಗಳ ಮೇಲಿನ 90 ದಿನಗಳ ಮಿತಿಯನ್ನು ತೆಗೆದು ಹಾಕಿರುವ ಟ್ರಾಯ್ ಇದನ್ನು 365 ದಿನಗಳವರೆಗೆ ವಿಸ್ತರಿಸಬೇಕು ಎಂದು ಮೊಬೈಲ್ ಸೇವಾ ಪೂರೈಕೆದಾರರಿಗೆ ಸೂಚಿಸಿದೆ. ವೃದ್ಧರು ಮತ್ತು ಮನೆಗಳಲ್ಲಿ ಬ್ರಾಡ್ ಬ್ಯಾಂಡ್ ಹೊಂದಿದವರಿಗೆ ಇಂಟರ್ನೆಟ್ ರಿಚಾರ್ಜ್ ಮಾಡಿಸುವ ಅವಶ್ಯಕತೆ ಇಲ್ಲದಿರುವುದನ್ನು ಗಮನಿಸಿ ಕರೆ ಮತ್ತು ಸಂದೇಶ ರವಾನೆಗೆ ಪ್ರತ್ಯೇಕ ದರ ಪಟ್ಟಿ ತಯಾರಿಸಲು ಸೂಚನೆ ನೀಡಿದೆ.
ಇದರಿಂದ ಡೇಟಾ ಒಳಗೊಳ್ಳುವಿಕೆಯ ಯೋಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಗ್ರಾಹಕರು ತಾವು ಬಳಸುವ ಸೇವೆಗೆ ಮಾತ್ರ ಹಣ ಪಾವತಿಸುವಂತಾಗುತ್ತದೆ. 10 ರೂಪಾಯಿ ರಿಚಾರ್ಜ್ ಕೂಪನ್ ಗಳನ್ನು ಕೂಡ ಒದಗಿಸಬೇಕೆಂದು ಟ್ರಾಯ್ ಸೂಚನೆ ನೀಡಿದೆ.