ಖ್ಯಾತ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅಭಿನಯಿಸಿರುವ ‘ಕಣ್ಣಾ ಮುಚ್ಚೆ ಕಾಡೇಗೂಡೇ’ ಚಿತ್ರದ ಟೀಸರ್ ಅನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರ ಗಮನ ಸೆಳೆದಿದೆ.
ನಟರಾಜ ಕೃಷ್ಣೇಗೌಡ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅಥರ್ವ ಪ್ರಕಾಶ್, ಜ್ಯೋತಿಶ್ ಶೆಟ್ಟಿ, ಪ್ರಾರ್ಥನಾ, ದೀಪಕ್ ರೈ, ರವಿರಾಮ್ ಕುಂಜ, ಅರವಿಂದ್ ಬೋಳಾರ್, ವೀರೇಶ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಡಾರ್ಲಿಂಗ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಅನಿತಾ ವೀರೇಶ್ ಕುಮಾರ್ ನಿರ್ಮಾಣ ಮಾಡಿದ್ದು, ಶ್ರೀ ಶಾಸ್ತಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಲೆಕ್ಸ್ ಹೆನ್ಸನ್ ಸಂಕಲನ, ಹಾಗೂ ದೀಪಕ್ ಕುಮಾರ್ ಛಾಯಾಗ್ರಹಣವಿದೆ.