ಬೆಂಗಳೂರು: ಬೆಂಗಳೂರಿನಲ್ಲಿ ಮಾಂಸದ ಅಂಗಡಿಯಲ್ಲಿಯೇ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಬೇಗೂರಿನ ಎಎ ಬೀಫ್ ಸ್ಟಾಲ್ ನಲ್ಲಿ ಘಟನೆ ನಡೆದಿದೆ.
ಅಪ್ಸರ್ ಎಂಬ ವ್ಯಕ್ತಿಯನ್ನು ಮಾಂಸದ ಅಂಗಡಿಯ ಮಾಲೀಕ ಕೊಲೆ ಮಾಡಿದ್ದಾನೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಂಗಡಿಯ ಮಾಲೀಕ ಅಕ್ಬರ್ ಕೊಲೆ ಮಾಡಿದ ಆರೋಪಿ. ಮಚ್ಚಿನಿಂದ ತಲೆಗೆ ಹೊಡೆದು ಅಪ್ಸರ್ ನನ್ನು ಅಕ್ಬರ್ ಕೊಲೆ ಮಾಡಿದ್ದಾನೆ. ಕೊಲೆಯಾಗಿರುವ ಅಪ್ಸರ್ ಶಿವಾಜಿನಗರದ ನಿವಾಸಿಯಾಗಿದ್ದಾನೆ. ಎಂಟು ತಿಂಗಳ ಹಿಂದೆ ಅಕ್ಬರ್(47), ಅಪ್ಸರ್(45) ಅಂಗಡಿ ಆರಂಭಿಸಿದ್ದರು. ಆದರೆ ಮಾಂಸದ ಅಂಗಡಿಯಲ್ಲಿ ವ್ಯಾಪಾರ ಸರಿಯಾಗಿ ಆಗುತ್ತಿರಲಿಲ್ಲ. ಇದರಿಂದ ಬಂಡವಾಳದ ಹಣ ವಾಪಸ್ ಕೊಡುವಂತೆ ಅಕ್ಬರ್ ಕೇಳಿದ್ದ. ಸುಮಾರು ಮೂರು ಲಕ್ಷ ರೂಪಾಯಿ ಹಣವನ್ನು ಅಪ್ಸರ್ ನೀಡಿದ್ದ. ಆದರೆ, ಬಾಕಿ 20 ಸಾವಿರ ರೂ. ಕೊಡುವಂತೆ ಒತ್ತಾಯಿಸಿದ್ದು, ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.