ನವದೆಹಲಿ: ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ದೈಹಿಕ ನ್ಯೂನ್ಯತೆ ಬಗ್ಗೆ ಸುಳ್ಳು ಹೇಳಿ, ನಕಲಿ ಒಬಿಸಿ ಪ್ರಮಾಣ ಪತ್ರ ಮಾಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಪೂಜಾಖೇಡ್ಕರ್ ದೆಹಲಿ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.
ಪೂಜಾ ಖೇಡ್ಕರ್ ಎಲ್ಲವನ್ನೂ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಆಕೆ ಉದ್ದೇಶ ಅಧಿಕಾರಿಗಳನ್ನು ವಂಚಿಸುವುದು, ಪಿತೂರಿ ನಡೆಸುವುದೂ ಆಗಿತ್ತು. ಆಕೆ ವಿರುದ್ಧದ ಆರೋಪ ರಾಷ್ಟ್ರದ ದೊಡ್ಡ ವಂಚನೆಗೆ ಉದಾಹಣೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.