ಫಸ್ಟ್ ರಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ ಬಹು ನಿರೀಕ್ಷಿತ ‘ರಾಜು ಜೇಮ್ಸ್ ಬಾಂಡ್’ ಇದೆ ಡಿಸೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿತ್ತು, ಕಾರಣಾಂತರದಿಂದ ಚಿತ್ರತಂಡ ಇದೀಗ ದಿನಾಂಕವನ್ನು ಬದಲಾಯಿಸುತ್ತಿದ್ದು, ಹೊಸ ವರ್ಷಕ್ಕೆ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಈ ಚಿತ್ರವನ್ನು ಕರ್ಮ ಬ್ರೌಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಗುರುನಂದನ್ ಸೇರಿದಂತೆ ಮೃದುಲಾ, ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ ತಾರಾಂಗಣದಲ್ಲಿದ್ದಾರೆ. ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದು, ಅಕ್ಷಯ್ ಪಿ ರಾವ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ಜಗದೀಶ್ ನಾಡನಳ್ಳಿ ಸಂಭಾಷಣೆ, ಮುರಳಿ ನೃತ್ಯ ನಿರ್ದೇಶನವಿದೆ.