ಧಾರವಾಡ: ಮರಕ್ಕೆ ಕಾರ್ ಡಿಕ್ಕಿಯಾಗಿ ಓರ್ವ ಸಾವು ಕಂಡಿದ್ದು, ಐವರಿಗೆ ಗಂಭೀರ ಗಾಯಗಳಾದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾರ್ ನಲ್ಲಿದ್ದ ಸುಶೀಲ್ ಕುಮಾರ್ ದೇಶಪಾಂಡೆ(33) ಮೃತಪಟ್ಟವರು ಎಂದು ಹೇಳಲಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಧಾರವಾಡದಿಂದ ಕಾರವಾರಕ್ಕೆ ಸ್ನೇಹಿತನ ಮದುವೆಗೆ ತೆರಳಿದ್ದ ಇವರು ಮದುವೆ ಮುಗಿಸಿಕೊಂಡು ಹಿಂತಿರುಗುವಾಗ ಅಪಘಾತ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರ್ ಡಿಕ್ಕಿಗಾಗಿ ಅವಘಡ ಸಂಭವಿಸಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.