‘ಕೇಡಿ’ ಚಿತ್ರದ ‘ಶಿವ ಶಿವ’ ಸಾಂಗ್ ಪ್ರೊಮೊ ರಿಲೀಸ್ 22-12-2024 4:05PM IST / No Comments / Posted In: Featured News, Live News, Entertainment ಧ್ರುವ ಸರ್ಜಾ ಅಭಿನಯದ ‘ಕೇಡಿ’ ಚಿತ್ರದ ‘ಶಿವ ಶಿವ’ ಹಾಡು ಇದೇ ಡಿಸೆಂಬರ್ 24ರಂದು youtube ನಲ್ಲಿ ಬಿಡುಗಡೆಯಾಗಲಿದ್ದು, ಈ ಹಾಡಿನ ಪ್ರೋಮೋವನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಒಟ್ಟಾರೆ ಐದು ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಲಿದ್ದು, ಕನ್ನಡದಲ್ಲಿ ನಿರ್ದೇಶಕ ಪ್ರೇಮ್ ಹಾಗೂ ಕೈಲಾಶ್ ಖೇರ್ ಧ್ವನಿಗೂಡಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದು, ಮಂಜು ಗೌಡ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಸೇರಿದಂತೆ ರೀಷ್ಮಾ ನಾಣಯ್ಯ, ವಿ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ, ಯಶ್ ಶೆಟ್ಟಿ ಬಣ್ಣ ಹಚ್ಚಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ, ಕ್ರಾಂತಿ ಕುಮಾರ್ ಸಂಭಾಷಣೆ, ರಾಜು ಸುಂದರಂ, ನಾಗೇಶ್ ವಿ ರೆಡ್ಡಿ, ಭಜರಂಗಿ ಮೋಹನ್ ಹಾಗೂ ಪ್ರಭುದೇವ ಅವರ ನೃತ್ಯ ನಿರ್ದೇಶನವಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ.