ರಾಯಚೂರು: ಲಾರಿ ಡಿಕ್ಕಿಯಾಗಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದಿದ್ದು, 55 ವರ್ಷದ ಮಹಿಳೆ ದೇಹ ಛಿದ್ರವಾಗಿದೆ.
ಹುಸೇನಮ್ಮ ಮೃತಪಟ್ಟವರು. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಹೊರಗಿನ ಮರ ಕ್ರಾಸ್ ನಲ್ಲಿ ಬೀಕರ ಅಪಘಾತ ಸಂಭವಿಸಿದೆ. ಪುಲಮೇಶ್ವರ ದಿನ್ನಿ ಗ್ರಾಮದ ಹುಸೇನಮ್ಮ ಮಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಬೈಕ್ ಗೆ ಹಿಂದಿನಿಂದ ಲಾರಿ ಡಿಕ್ಕಿಯಾಗಿ ಕೆಳಗೆ ಬಿದ್ದ ಅವರ ಮೇಲೆ ಲಾರಿ ಹರಿದಿದೆ. ತಾಯಿ ದೇಹದ ಅರ್ಧ ಭಾಗ ಹಿಡಿದು ಮಗ ಗೋಳಾಟ ನಡೆಸಿದ್ದಾನೆ. ಸಿಂಧನೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.