ಉಡುಪಿ : ಉಡುಪಿಯ ‘ಕುದ್ರು ನೆಸ್ಟ್’ ರೆಸಾರ್ಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.
ತಿಮ್ಮಣ್ಣುಕುದ್ರುವಿನ ಖಾಸಗಿ ರೆಸಾರ್ಟ್’ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕುದ್ರು ನೆಸ್ಟ್ ” ಎಂಬ ರೆಸಾರ್ಟ್’ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಬೆಂಕಿ ಹತ್ತಿಕೊಂಡು ಬಿದಿರಿನಿಂದ ನಿರ್ಮಿಸಲ್ಪಟ್ಟ ಮಹಡಿ ಮತ್ತು ಇತರ ಅಲಂಕಾರಿಕ ಭಾಗಗಳಿಗೆ ಬೆಂಕಿ ಹಬ್ಬಿದೆ.ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದ್ದು, ಅದರೊಳಗೆ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.