ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇಂತಹ ವಿಡಿಯೋ ನೀವು ಎಲ್ಲಿಯೋ ನೋಡಿರಕ್ಕಿಲ್ಲ. ಸಾಮಾನ್ಯವಾಗಿ ಕುಟುಂಬಸ್ಥರು ಮೃತಪಟ್ಟಾಗ ಶವದ ಮುಂದೆ ಕುಳಿತು ರೋಧಿಸುವುದು ಸಾಮಾನ್ಯ. ಆದರೆ ಎಲ್ಲರೂ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡುವುದನ್ನು ನೀವು ನೋಡಿದ್ದೀರಾ..ಅಂತಹದ್ದೇ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಅಜ್ಜಿಯ ಮೃತದೇಹದ ಮುಂದೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ ಮಹಿಳೆಯರು-ಮಕ್ಕಳು
ಕುತೂಹಲಕಾರಿ ಸಂಗತಿಯೆಂದರೆ, ತಮಿಳುನಾಡಿನ ಮಧುರೈ ಜಿಲ್ಲೆಯ ಕುಟುಂಬವೊಂದು ಮಹಿಳೆಯ ಅಂತಿಮ ಆಸೆಯನ್ನು ಈಡೇರಿಸಲು ಮಹಿಳೆಯ ಅಂತ್ಯಕ್ರಿಯೆಯನ್ನು ಸಂತೋಷವಾಗಿ ಆಚರಣೆ ಮಾಡಿದೆ.
ಉಸಿಲಂಪಟ್ಟಿಯ ನಾಗಮ್ಮಾಳ್ (96) ಇತ್ತೀಚೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾದರು. ಸಾಯುವ ಮೊದಲು, ನಾಗಮ್ಮಾಳ್ ಅವರು ತಮ್ಮ ಅಂತ್ಯಕ್ರಿಯೆಯನ್ನು ಸಂತೋಷದಿಂದ , ಖುಷಿ ಖುಷಿಯಾಗಿ ನೆರೆವೇರಿಸಬೇಕೆಂದು ಆಶಿಸುತ್ತೇನೆ ಎಂದು ತಮ್ಮ ಆಸೆ ಹೇಳಿಕೊಂಡಿದ್ದರು. ಅಂತೆಯೇ ಕುಟುಂಬಸ್ಥರು ಶವದ ಮುಂದೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಮತ್ತು 78 ಮೊಮ್ಮಕ್ಕಳು ಸೇರಿದಂತೆ ಮೂರು ತಲೆಮಾರಿನ ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳನ್ನು ವೃದ್ದೆ ಅಗಲಿದ್ದಾರೆ. ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಅವರಿಗೆ ವಿದಾಯ ಹೇಳಿದರು. ಕೊನೆಯಲ್ಲಿ, ದುಃಖದ ಸಾಂಪ್ರದಾಯಿಕ ಹಾಡು, ನೃತ್ಯಗಳನ್ನು ಸಹ ಪ್ರದರ್ಶಿಸಲಾಯಿತು.
96 வயதில் காலமான பாட்டியின் ஆசையை நிறைவேற்ற பேரன் பேத்திகள் செய்த ஏற்பாடு..!#Madurai | #OldLady | #Death | #Dance pic.twitter.com/cxk7VfN7bG
— Polimer News (@polimernews) December 20, 2024