ಬೆಂಗಳೂರು : ನಟ ನವೀನ್ ಶಂಕರ್ ಅಭಿನಯದ ‘ನೋಡಿದವರು ಏನಂತಾರೆ’ ಚಿತ್ರದ ಟೀಸರ್ ರಿಲೀಸ್ ಆಗಿದೆ.
‘ಧರಣಿ ಮಂಡಲ ಮದ್ಯದೊಳಗೆ’ ಸಿನಿಮಾದ ಮೂಲಕ ಸಿನಿಪ್ರಿಯರ ಗಮನ ಸೆಳೆದ ಭರವಸೆಯ ನಾಯಕ ನವೀನ್ ಶಂಕರ್ ಇದೀಗ ಹೊಸ ಸಿನಿಮಾದ ಮೂಲಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ.
ಸದ್ಯ ನೋಡಿದವರು ಏನಂತಾರೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಾದ ಧರಣಿ ಮಂಡಲ ಮಧ್ಯದೊಳಗೆ ಮತ್ತು ಹೊಂದಿಸಿ ಬರೆಯಿರಿ ಹಾಗೂ ಹೊಯ್ಸಳ ಮತ್ತು ಸಲಾರ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹೊಸ ವರ್ಷದಲ್ಲಿ ಜ.31 ರಂದು ಸಿನಿಮಾ ತೆರೆಗೆ ಬರಲಿದೆ.
♪ ತಾರಾಗಣ: ನವೀನ್ ಶಂಕರ್, ಅಪೂರ್ವ ಭಾರದ್ವಾಜ್, ಪದ್ಮಾವತಿ ರಾವ್ (ಅಕ್ಷತಾ ರಾವ್)
ಐರಾ ಕೃಷ್ಣ, ರಾಜೇಶ್ ಮತ್ತು ಇತರರು
♪ ಕಥೆ-ಚಿತ್ರಕಥೆ-ನಿರ್ದೇಶನ: ಕುಲದೀಪ್ ಕಾರ್ಯಪ್ಪ
♪ ನಿರ್ಮಾಣ : ನಾಗೇಶ್ ಗೋಪಾಲ್
♪ ಸಹ-ನಿರ್ಮಾಣ: ರವಿಕುಮಾರ್, ಲಕ್ಷ್ಮಣ್ ಮತ್ತು ಮಾದೇಶ್
♪ ಛಾಯಾಗ್ರಹಣ ನಿರ್ದೇಶಕ: ಅಶ್ವಿನ್ ಕೆನಡಿ
♪ ಸಂಪಾದಕ: ಮನು ಶೇಡ್ಗಾರ್
♪ ಸಂಗೀತ: ಮಯೂರೇಶ್ ಅಧಿಕಾರಿ
♪ ಸಂಭಾಷಣೆ: ಕುಲದೀಪ್ ಕಾರ್ಯಪ್ಪ, ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಸುನಿಲ್ ವೆಂಕಟೇಶ್
♪ ಸಾಹಿತ್ಯ, ಜಯಂತ್ ಕಾಯ್ಕಿಣಿ, ಲೈಲಾ
♪ ಗಾಯಕರು: ಕೋಕಿಲಾ ಸಾಧು, ಕೀರ್ತನ್ ಹೊಳ್ಳ, ಅನನ್ಯಾ ಭಟ್, ಲೈಲಾ,
ಜೋರ್ಡಾನ್ ರಾಬರ್ಟ್ ಕಿರ್ಕ್