alex Certify BIG NEWS : 87 ನೇ ಅಖಿಲ ಭಾರತ ‘ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೆಟ್ಸ್ ಹೀಗಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : 87 ನೇ ಅಖಿಲ ಭಾರತ ‘ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೆಟ್ಸ್ ಹೀಗಿದೆ

ಮಂಡ್ಯ : ಮಂಡ್ಯದಲ್ಲಿ ನಿನ್ನೆ ( ಡಿ.20) ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೆಟ್ಸ್

ಮಂಡ್ಯ ಜಿಲ್ಲೆ ಅಪ್ಪಟ ಕನ್ನಡದ ನೆಲ. ಜಗತ್ತಿನ ಯಾವುದೇ ಮೂಲೆಯಿಂದ ಯಾವುದೇ ಭಾಷಿಗರು ಮಂಡ್ಯಕ್ಕೆ ಬಂದರೂ ಒಂದು ತಿಂಗಳೊಳಗೆ ಅವರಿಗೆ ಕನ್ನಡ ಕಲಿಸುವಂತಹ ಭಾಷಾಭಿಮಾನ ಮತ್ತು ದಿಟ್ಟತನ ಮಂಡ್ಯದ ಜನರದ್ದು.

• ನಾಡದೇವಿ ಭುವನೇಶ್ವರಿಯ ೨೫ ಅಡಿ ಎತ್ತರದ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸುತ್ತಿದ್ದೇವೆ.

• ಕರ್ನಾಟಕ ಎಂದು ಮರುನಾಮಕರಣ ಮಾಡಲು ಕಾರಣೀಭೂತರಾದ ದೇವರಾಜ ಅರಸರ ಪ್ರತಿಮೆಯನ್ನು ಮೈಸೂರಿನಲ್ಲಿ ಸ್ಥಾಪಿಸಲಾಗುತ್ತಿದೆ.

. ಏಕೀಕರಣ ಚಳವಳಿಯ ಸಂದರ್ಭದಲ್ಲಿ ಮಹತ್ತರ ಪಾತ್ರ ವಹಿಸಿದ ರಂಜಾನ್ ಸಾಬ್, ದೊಡ್ಡ ಮೇಟಿ ಅಂದಾನಪ್ಪ, ಧಾರವಾಡದ ಅದರಗುಂಚಿ ಶಂಕರೇಗೌಡರ ಸ್ಮಾರಕಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ.

 

• ಇದೇ ಸಂದರ್ಭದಲ್ಲಿ ಗಡಿನಾಡ ಉತ್ಸವವನ್ನು ಗಡಿ ಭಾಗದ ಜತ್ತದಲ್ಲಿ ಮಾಡಲಾಯಿತು. ಗೋಕಾಕ್ ಚಳವಳಿಯ ಹಿನ್ನೋಟ – ಮುನ್ನೋಟ ಕಾರ್ಯಕ್ರಮವನ್ನು ಗಡಿ ಜಿಲ್ಲೆಯಾದ ರಾಯಚೂರಿನಲ್ಲಿ ಮಾಡಲಾಯಿತು.
• ಸುವರ್ಣ ಸಂಭ್ರಮದ ಈ ವರ್ಷ ೧೦೦ ಜನ ಸಾಧಕರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.
• ರಾಜ್ಯ ಸರ್ಕಾರ ಕನ್ನಡದ ಕೆಲಸ ಕಾರ್ಯಗಳಿಗೆ ಹೆಚ್ಚಿನ ವ್ಯಾಪ್ತಿಯನ್ನು ದೊರಕಿಸುವ ಸಲುವಾಗಿ `ಸಮಗ್ರ ಕನ್ನಡ ಭಾಷಾ ಬಳಕೆ ಕಾಯ್ದೆ’ಯನ್ನು ಜಾರಿಗೆ ತ೦ದಿದ್ದೇವೆ. ಇಂದಿನ ಕಾಲಘಟ್ಟದಲ್ಲಿ ಕನ್ನಡದ ಸವಾಲುಗಳು ಬಹುಮುಖಿಯಾಗಿದ್ದು, ಇವೆಲ್ಲವನ್ನು ಕಾನೂನಿನ ವ್ಯಾಪ್ತಿಯಲ್ಲಿ ತಂದು ಕನ್ನಡಕ್ಕೆ ಮೊದಲ ಪ್ರಾಶಸ್ತ್ರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.
• ೨೦೧೩-೧೮ರ ವರೆಗಿನ ನಮ್ಮ ಈ ಹಿಂದಿನ ಅಧಿಕಾರದ ಅವಧಿಯಲ್ಲಿ ೧೧೬೧ ಕೋಟಿ ರೂಪಾಯಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದ್ದೆವು. ೨೦೨೩-೨೪ ಮತ್ತು ೨೦೨೪-೨೫ ಎರಡೂ ವರ್ಷಗಳಲ್ಲಿ ೫೦೬ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡಿದ್ದೇವೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...