alex Certify BREAKING: ಕ್ರಿಸ್ಮಸ್ ಹೊತ್ತಲ್ಲೇ ದುಷ್ಕರ್ಮಿಗಳ ಅಟ್ಟಹಾಸ: ಜನಸಮೂಹದ ಮೇಲೆ ಕಾರ್ ನುಗ್ಗಿಸಿ ಇಬ್ಬರ ಹತ್ಯೆ: 68 ಜನರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕ್ರಿಸ್ಮಸ್ ಹೊತ್ತಲ್ಲೇ ದುಷ್ಕರ್ಮಿಗಳ ಅಟ್ಟಹಾಸ: ಜನಸಮೂಹದ ಮೇಲೆ ಕಾರ್ ನುಗ್ಗಿಸಿ ಇಬ್ಬರ ಹತ್ಯೆ: 68 ಜನರಿಗೆ ಗಾಯ

ಬರ್ಲಿನ್: ಶುಕ್ರವಾರ ಸಂಜೆ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದಲ್ಲಿ ಕ್ರಿಸ್ಮಸ್ ಮಾರುಕಟ್ಟೆಯ ಮೇಲೆ ಶಂಕಿತ ದಾಳಿಯಲ್ಲಿ ಮಗು ಸೇರಿದಂತೆ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. 68 ಜನ ಗಾಯಗೊಂಡಿದ್ದಾರೆ.

ಕಾರೊಂದು ಉದ್ದೇಶಪೂರ್ವಕವಾಗಿ ಜನಸಮೂಹದ ಮೇಲೆ ನುಗ್ಗಿದ್ದು, ಸಾವು ನೋವುಗಳಿಗೆ ಕಾರಣವಾಗಿದೆ. ಸೌದಿ ವ್ಯಕ್ತಿಯನ್ನು ಬಂಧಿಸಲಾಗಿದೆ.

ಸ್ಯಾಕ್ಸೋನಿ-ಅನ್ಹಾಲ್ಟ್ ಅಧ್ಯಕ್ಷ ರೈನರ್ ಹೆಸೆಲಾಫ್ ಅವರ ಪ್ರಕಾರ, ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ 15 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ತುರ್ತು ತಂಡಗಳು, 100 ಅಗ್ನಿಶಾಮಕ ಸಿಬ್ಬಂದಿ ಮತ್ತು 1 50 ರಕ್ಷಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದು, ವೈದ್ಯಕೀಯ ನೆರವು ನೀಡಲು ಮತ್ತು ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸಲು ನೆರವಾಗಿದ್ದಾರೆ.

ಜರ್ಮನಿಯ ಆಂತರಿಕ ಸಚಿವ ನ್ಯಾನ್ಸಿ ಫೈಸರ್ ಅವರು ಘಟನೆಯನ್ನು “ಆಘಾತಕಾರಿ” ಎಂದು ಕರೆದಿದ್ದಾರೆ. ಶಂಕಿತ ಚಾಲಕನ ಬಂಧನವನ್ನು ಪೊಲೀಸರು ಖಚಿತಪಡಿಸಿದ್ದಾರೆ, ಅವನು ಒಬ್ಬನೇ ಕೃತ್ಯ ಎಸಗಿದ್ದಾನೆ ಎಂದು ನಂಬಲಾಗಿದೆ. ಪ್ರಸ್ತುತ ಮಾಹಿತಿಯ ಪ್ರಕಾರ, ಅಪರಾಧಿಯನ್ನು ಬಂಧಿಸಿರುವುದರಿಂದ ನಗರಕ್ಕೆ ಇನ್ನು ಮುಂದೆ ಯಾವುದೇ ಅಪಾಯವಿಲ್ಲ ಎಂದು ಮೇಯರ್ ಹ್ಯಾಸೆಲೋಫ್ ದೂರದರ್ಶನದ ಭಾಷಣದಲ್ಲಿ ಹೇಳಿದರು.

ಈ ಘಟನೆಯು ಸ್ಥಳೀಯರನ್ನು ಆಘಾತಕ್ಕೀಡು ಮಾಡಿದೆ. ಕ್ರಿಸ್ಮಸ್ ಮಾರುಕಟ್ಟೆಯ ಹಬ್ಬದ ಉತ್ಸಾಹವನ್ನು ಮರೆಮಾಡಿದೆ.

ಶುಕ್ರವಾರ. ರಜಾ ದಿನ ರಾತ್ರಿ 7 ಗಂಟೆ ಸುಮಾರಿಗೆ ಕಾರೊಂದು ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಗೆ ನುಗ್ಗಿದೆ. ಶಂಕಿತನನ್ನು ಬಂಧಿಸಲಾಗಿದೆ. ಆರೋಪಿಯನ್ನು 2006 ರಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದ 50 ವರ್ಷದ ಸೌದಿ ವೈದ್ಯ ಎಂದು ಗುರುತಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...