ಬೆಂಗಳೂರು: ಹೆರಿಗೆ ಮಾಡಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದ ನರ್ಸ್ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೀಣ್ಯ ದಾಸರಹಳ್ಳಿ ಮಲ್ಲಸಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಗಂಗಾಲಕ್ಷ್ಮಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ನಿವಾಸಿ ಕಮಲಮ್ಮ ತಮ್ಮ ಪುತ್ರಿಯನ್ನು ಹೆರಿಗೆಗೆ ಕರೆದುಕೊಂಡು ಬಂದಿದ್ದು, 6500 ರೂ. ಕೊಡುವಂತೆ ನರ್ಸ್ ಗಂಗಾಲಕ್ಷ್ಮಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 5,500 ರೂ. ಕೊಡಲು ಮಾತುಕತೆಯಾಗಿದ್ದು, ಹೆರಿಗೆಯಾದ ನಂತರ 5ಸಾವಿರ ರೂಪಾಯಿಗಳನ್ನು ಪೋನ್ ಪೇ ಮಾಡಿಸಿಕೊಂಡಿದ್ದಾರೆ. ಉಳಿದ 500 ರೂಪಾಯಿ ನಗದು ಕೊಡುವಂತೆ ತಿಳಿಸಿದ್ದಾರೆ.
ಗುರುವಾರ ಸಂಜೆ ಹಣ ನೀಡುವಾಗ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಗಂಗಾಲಕ್ಷ್ಮಿಯವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.