ಬೆಂಗಳೂರು: ಸ್ನಾತಕೋತರ ವೈದ್ಯಕೀಯ -2024 ಕೋರ್ಸ್ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಶುಕ್ರವಾರ ಪ್ರಕಟಿಸಿದೆ.
ಒಟ್ಟು 2702 ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, ಡಿಸೆಂಬರ್ 26 ರೊಳಗೆ ಶುಲ್ಕ ಪಾವತಿಸಿ ಡಿಸೆಂಬರ್ 27 ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು. ಸಿಕ್ಕಿರುವ ಸೀಟು ಇಷ್ಟವಿಲ್ಲದಿದ್ದಲ್ಲಿ 1.50 ಲಕ್ಷ ರೂ. ದಂಡ ಕಟ್ಟಿ ಮೂಲ ದಾಖಲೆಗಳನ್ನು ವಾಪಸ್ ಪಡೆಯಬಹುದು. ಒಟ್ಟು 4651 ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಸ್ವೀಕರಿಸಿದ್ದು, ಎಲ್ಲರನ್ನೂ ಸೀಟು ಹಂಚಿಕೆಗೆ ಪರಿಗಣಿಸಲಾಗಿದೆ. ಮೂಲ ದಾಖಲೆ ಸಲ್ಲಿಸದವರನ್ನು ಪರಿಗಣಿಸಲಾಗಿಲ್ಲ ಎಂದು ಹೇಳಲಾಗಿದೆ.
#PGMedical 2ನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. 2,702 ಸೀಟು ಹಂಚಿಕೆ ಆಗಿವೆ. ದಾಖಲೆ ಸಲ್ಲಿಸಿದ್ದ 4,651 ಮಂದಿಯನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗಿದೆ. ಡಿ.26ರೊಳಗೆ ಶುಲ್ಕ ಪಾವತಿಸಿ, ಡಿ.27ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳುವುದು.@CMofKarnataka @drmcsudhakar
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) December 20, 2024