ಬೆಂಗಳೂರು : ಜಾಮೀನು ಕೋರಿ ಬೆಂಗಳೂರಿನ ಕೋರ್ಟ್ ಗೂ ಸಿ.ಟಿ ರವಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಜಾಮೀನು ಕೋರಿ ಸಿ.ಟಿ ರವಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಪ್ರತ್ಯೇಕ್ಷ ಸೆಕ್ಷನ್ ಗಳಡಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಯಲಿದೆ.
ಹಾಗೂ MLC ‘ಸಿ.ಟಿ ರವಿ’ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿ ಬೆಳಗಾವಿ ಜೆಎಂಎಫ್ ಸಿ ಕೋರ್ಟ್ ಆದೇಶ ಹೊರಡಿಸಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಸಿ ಬಂಧನಕ್ಕೊಳಗಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಪೊಲೀಸರು ಇಂದು ಬೆಳಗಾವಿ JMFC ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿದೆ.
ಪ್ರತ್ಯೇಕ್ಷ ಸೆಕ್ಷನ್ ಗಳಡಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಯಲಿದೆ.
ಬೆಳಗಾವಿ ಕೋರ್ಟ್ ನಲ್ಲಿ ಏನೆಲ್ಲಾ ನಡೆಯಿತು..?
ಮೊದಲಿಗೆ ವಯಸ್ಸು ಕೇಳಿದ ಜಡ್ಜ್ ನಿಮ್ಮನ್ನು ಎಲ್ಲಿ..? ಯಾವಾಗ ಅರೆಸ್ಟ್ ಮಾಡಿದ್ದಾರೆ ಎಂದು ಸಿಟಿ ರವಿಯನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಟಿ.ರವಿ “ನನ್ನನ್ನು ಸಂಜೆ 6 :30 ರ ವೇಳೆಗೆ ಸುವರ್ಣಸೌಧದಿಂದ ನನ್ನನ್ನು ಬಂಧಿಸಿದ್ದಾರೆ. ಬಳಿಕ 10 ಗಂಟೆಗಳ ಕಾಲ ರಾತ್ರಿ ಇಡೀ ಮೂರು ಜಿಲ್ಲೆಗಳನ್ನು ಸುತ್ತಿಸಿದ್ದಾರೆ ಎಂದು” ಸಿಟಿ ರವಿ ಹೇಳಿದ್ದಾರೆ. ನಂತರ ನಡೆದ ಘಟನೆ ಬಗ್ಗೆ ಜಡ್ಜ್ ಬಳಿ ಸಿಟಿ ರವಿ ಎಳೆಎಳೆಯಾಗಿ ಹೇಳಿದ್ದಾರೆ. ನನ್ನನ್ನು ಪೊಲೀಸರು ಹಲವು ಕಡೆ ಕರೆದುಕೊಂಡು ಹೋಗಿದ್ದಾರೆ. ನನಗೆ ಖಾನಾಪುರದಲ್ಲಿ ಹೊಡೆದರು. ಆಗ ನನ್ನ ತಲೆಯಿಂದ ರಕ್ತ ಬಂತು ಎಂದು ಸಿ.ಟಿ ರವಿ ಆರೋಪ ಮಾಡಿದ್ದಾರೆ.
ಯಾರು ಹೊಡೆದಿದ್ದು ಎಂದು ನನಗೆ ಗೊತ್ತಾಗಲಿಲ್ಲ, ಪೊಲೀಸರೇ ನನಗೆ ಹೊಡೆದಿರಬಹುದು. ನನಗೆ ಪೊಲೀಸರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ನನ್ನ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ಪೊಲೀಸರ ವಿರುದ್ಧ ಸಿಟಿ ರವಿ ಆರೋಪ ಮಾಡಿದ್ದಾರೆ. ಪೊಲೀಸರಿಗೆ 10 ನಿಮಿಷಕ್ಕೊಂದು ಕಾಲ್ ಬರುತ್ತಿತ್ತು, ಆ ಸೂಚನೆಯಂತೆ ಪೊಲೀಸರು ವರ್ತಿಸಿದ್ದಾರೆ ಎಂದು ಸಿಟಿ ರವಿ ಜಡ್ಜ್ ಮುಂದೆ ಹೇಳಿಕೊಂಡಿದ್ದಾರೆ.
ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸುವರ್ಣಸೌಧದಲ್ಲಿಯೇ ಅವರನ್ನು ಪೊಲೀಸರು ಬಂಧಿಸಿ ಖಾನಾಪುರ ಠಾಣೆಗೆ ಕರೆತಂದಿದ್ದರು. ನಂತರ ರಾತ್ರಿ ಇಡೀ ಅವರನ್ನು ಬೆಳಗಾವಿ, ರಾಮದುರ್ಗ, ಕಿತ್ತೂರು, ಧಾರವಾಡ ಸೇರಿ ವಿವಿಧೆಡೆ ಪೊಲೀಸ್ ವಾಹನದಲ್ಲಿ ಸುತ್ತಾಡಿಸಲಾಗಿತ್ತು ಎನ್ನಲಾಗಿದೆ. ಈ ನಡುವೆ ಅವರ ತಲೆಗೆ ಪೆಟ್ಟಾಗಿದ್ದು, ಕಿತ್ತೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮತ್ತೆ ರೌಂಡ್ಸ್ ನಡೆಸಿದ್ದಾರೆ.