ತನ್ನ ಟೈಟಲ್ ಹಾಗೂ ಹಾಡಿನಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದ ‘ಮೂರು ಕಾಸಿನ ಕುದುರೆ’ ಚಿತ್ರದ ಮತ್ತೊಂದು ಲಿರಿಕಲ್ ಹಾಡು ಇಂದು ಯೂಟ್ಯೂಬಲ್ಲಿ ಬಿಡುಗಡೆಯಾಗಲಿದೆ. ”ಮನಿ ಮನಿ” ಎಂಬ ಈ ಹಾಡು ಅದಿತಿ ಸಾಗರ್ ಅವರ ಧ್ವನಿಯಲ್ಲಿ ಮೂಡಿ ಬಂದಿದೆ.
ಕರ್ತೃ ಗಿರೀಶ್ ನಿರ್ದೇಶನದ ಈ ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಸೇರಿದಂತೆ ಸನಾತನಿ, ಗೋವಿಂದೇಗೌಡ, ಕೃಷ್ಣ ಹೆಬ್ಬಾಳೆ, ರಾಕ್‌ಲೈನ್ ಸುಧಾಕರ್, ಅರ್ಜುನ್ ಪಾಳೇಗಾರ್ ಬಣ್ಣ ಹಚ್ಚಿದ್ದು, ಓಂ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ದೇಶಕ ಕರ್ತೃ ಗಿರೀಶ್ ಅವರೇ ನಿರ್ಮಾಣ ಮಾಡಿದ್ದಾರೆ. ಆನಂದ್ ರಾಜವಿಕ್ರಮ್ ಸಂಗೀತ ಸಂಯೋಜನೆ ನೀಡಿದ್ದು, ಮೋಹನ್ ಎಲ್ ರಂಗಕಹಳೆ ಸಂಕಲನ, ಪ್ರದೀಪ್ ಗಾಂಧಿ ಛಾಯಾಗ್ರಾಹಣ, ಮತ್ತು ಅಣ್ಣಪ್ಪ ಅವರ ಸಾಹಸ ನಿರ್ದೇಶನವಿದೆ.