ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಅವರಿಗೆ ಜಾಮೀನು ದೊರೆತಿದೆ. ಇದರಿಂದಾಗಿ ಕೊಂಚ ನಿಟ್ಟಿಸಿರು ಬಿಟ್ಟಿದ್ದ ಅವರಿಗೆ ಕೋರ್ಟ್ ನಿಂದ ಮತ್ತೊಂದು ರಿಲೀಫ್ ಸಿಕ್ಕಿದೆ.
ಬೆಂಗಳೂರಿನಲ್ಲಿರುವ ದರ್ಶನ್ ಅವರಿಗೆ ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಡಿಸೆಂಬರ್ 20 ರಿಂದ ಜನವರಿ 5ರವರೆಗೆ ಮೈಸೂರಿನಲ್ಲಿ ಇರಲು ದರ್ಶನ್ ಗೆ ಅನುಮತಿ ನೀಡಲಾಗಿದೆ. ಬಂಧನದ ನಂತರ ಆರು ತಿಂಗಳ ಬಳಿಕ ಮೈಸೂರಿಗೆ ಹೋಗಲು ದರ್ಶನ್ ಗೆ ಅವಕಾಶ ದೊರೆತಿದೆ.
ಮೈಸೂರಿನಲ್ಲಿರುವ ತಾಯಿಯನ್ನು ಭೇಟಿ ಮಾಡಬೇಕಿದೆ. ಫಾರ್ಮ್ ಹೌಸ್ ಗೆ ತೆರಳಬೇಕಿದೆ. ಅಲ್ಲಿರುವ ಪ್ರಾಣಿಗಳ ನೋಡಿಕೊಂಡು ಬರಬೇಕಿದೆ. ಜೊತೆಗೆ ಬೆನ್ನುಹುರಿ ನೋವಿಗೆ ಅಪೊಲೋ ಆಸ್ಪತ್ರೆ ವೈದ್ಯರ ಅಭಿಪ್ರಾಯ ಪಡೆಯಲು ಮೈಸೂರಿಗೆ ಹೋಗುಬೇಕಿದೆ ಎನ್ನುವ ಕಾರಣ ನೀಡಿ ದರ್ಶನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಸಿಸಿಹೆಚ್ 57ನೇ ನ್ಯಾಯಾಲಯದ ನ್ಯಾಯಾಧೀಶರಾದ ಜೈ ಶಂಕರ್ ಅನುಮತಿ ನೀಡಿದ್ದಾರೆ.