ನವದೆಹಲಿ: ಸಂಸ್ಕೃತಿ ಸಚಿವಾಲಯವು 60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಮತ್ತು ವಿದ್ವಾಂಸರಿಗೆ ಆರ್ಥಿಕ ಸಹಾಯ ಯೋಜನೆ ಪ್ರಾರಂಭಿಸಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, 60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಮತ್ತು ವಿದ್ವಾಂಸರಿಗೆ ಸಂಸ್ಕೃತಿ ಸಚಿವಾಲಯವು ಆರ್ಥಿಕ ನೆರವು ಯೋಜನೆಯನ್ನು ಪ್ರಾರಂಭಿಸಿದೆ. 60 ವರ್ಷ ವಯಸ್ಸಿನ ಹಿರಿಯ ಕಲಾವಿದರು ಮತ್ತು ವಿದ್ವಾಂಸರಿಗೆ ತಿಂಗಳಿಗೆ ಗರಿಷ್ಠ ಆರು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ತಮ್ಮ ವಿಶೇಷ ಕಲೆ ಮತ್ತು ಅಕ್ಷರ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೆರವು ನೀಡಲಾಗುತ್ತಿದೆ. ಫಲಾನುಭವಿಯ ಮರಣದ ಸಂದರ್ಭದಲ್ಲಿ, ಆರ್ಥಿಕ ಸಹಾಯವನ್ನು ಅವನ ಅಥವಾ ಅವಳ ಸಂಗಾತಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.