ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ(ರುಡ್‍ಸೆಟ್) ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ 562123 ಇಲ್ಲಿ ಉಪನ್ಯಾಸಕರ ಹುದ್ದೆಯು ಖಾಲಿ ಇದ್ದು, 22 ರಿಂದ 30 ವಯೋಮಾನದ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದು.
ಮನೋವಿಜ್ಞಾನದಲ್ಲಿ ಎಂ.ಎ., ಪತ್ರಿಕೋದ್ಯಮದಲ್ಲಿ ಎಂ.ಎ., ಗ್ರಾಮೀಣಾಭಿವೃದ್ಧಿಯಲ್ಲಿ ಎಂ.ಎ., ಸಮಾಜಶಾಸ್ತ್ರದಲ್ಲಿ ಎಂ.ಎ., ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಎಂ.ಕಾಂ, ಬಿಎಸ್ಸಿ, ಎಂಎಸ್‍ಡಬ್ಲ್ಯು, ಬಿಬಿಎಂ, ಬಿಎ, ಬಿಎಸ್ಸಿ ಜೊತೆಗೆ ಬಿಇಡಿ ಅಥವಾ ಎಂಇಡಿ ವಿದ್ಯಾರ್ಹತೆಯನ್ನು ಉಳ್ಳ ಅರ್ಹ ಯುವಕ/ಯುವತಿಯರು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಬಲ್ಲವರು, ಟೈಪಿಂಗ್ ಮಾಡುವ ಪರಿಣಿತಿಯನ್ನು ಹೊಂದಿರಬೇಕು. ಕಂಪ್ಯೂಟರ್ ನಲ್ಲಿ ಎಂಎಸ್ ವರ್ಡ್, ಎಂಎಸ್ ಎಕ್ಸೆಲ್ ಹಾಗೂ ಎಂಎಸ್ ಪವರ್ ಪಾಯಿಂಟ್ ನಲ್ಲಿ ಪರಿಣಿತಿಯನ್ನು ಹೊಂದಿರುವುದು ಕಡ್ದಾಯ.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟವನ್ನು ಇ-ಮೇಲ್ ಮುಖಾಂತರ ಮಾತ್ರ ಕಳುಹಿಸಬೇಕು. ಇ-ಮೇಲ್: rudsetinlm@gmail.com ಇಲ್ಲಿಗೆ ಡಿಸೆಂಬರ್ 28 ರೊಳಗೆ ಕಳುಹಿಸಬೇಕು. ತಿಂಗಳ ಸಂಬಳ 30 ಸಾವಿರ ರೂ.ಇದ್ದು, ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9113880324 ಅಥವಾ 9686172444 ಇಲ್ಲಿ ಸಂಪರ್ಕಿಸಬಹುದು ಎಂದು ಹೇಳಲಾಗಿದೆ.