ನೈನಿತಾಲ್‌ನಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ನಡೆದ ಉದ್ವಿಗ್ನ ವಾಗ್ವಾದದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ಡಿಸೆಂಬರ್ 14 ರಂದು ಪ್ರಣಯಿ ಪಾಯಿಂಟ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರು ಆ ಪ್ರದೇಶದಲ್ಲಿ ಕಸ ಹಾಕಿದ್ದಕ್ಕಾಗಿ ಸ್ಥಳೀಯರು ಪ್ರಶ್ನಿಸಿದ್ದರು. ಶಿಂಜಿನಿ ಸೆಂಗುಪ್ತಾ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ, ಪ್ರವಾಸಿಗರನ್ನು ರಸ್ತೆ ಮೇಲೆ ಕಸ ಎಸೆಯದಂತೆ ಹೇಳಿದ ಬಳಿಕ ನಡೆದ ಮಾತಿನ ಚಕಮಕಿಯನ್ನು ತೋರಿಸಲಾಗಿದೆ.
ಸೆಂಗುಪ್ತಾ ಅವರ ಪ್ರಕಾರ, ಲಕ್ನೋ ನೋಂದಣಿ ಫಲಕ ಹೊಂದಿರುವ ಕಾರಿನಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರು ಜನ್ಮದಿನವನ್ನು ಆಚರಿಸುತ್ತಿದ್ದಾಗ ರಸ್ತೆ ಮೇಲೆ ಬಳಸಿದ ಟಿಶ್ಯೂ ಮತ್ತು ಖಾಲಿ ಪ್ಯಾಕೆಟ್‌ಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ.
ಸೆಂಗುಪ್ತಾ ಅವರ ಸಹೋದರಿ ಇದನ್ನು ಗಮನಿಸಿ ಅವರನ್ನು ಹತ್ತಿರದ ಕಸದ ಬುಟ್ಟಿಯಲ್ಲಿ ತಮ್ಮ ಕಸವನ್ನು ವಿಲೇವಾರಿ ಮಾಡುವಂತೆ ಸಭ್ಯವಾಗಿ ಕೇಳಿದ್ದಾರೆ. ಆದರೆ ಮಹಿಳೆ, ಅಲ್ಲಿ ಯಾವುದೇ ಕಸದ ಬುಟ್ಟಿ ಇಲ್ಲ ಎಂದು ಹೇಳಿಕೊಂಡಿದ್ದು, ಆದಾಗ್ಯೂ, ಸೆಂಗುಪ್ತಾ ಅವರ ಕ್ಯಾಪ್ಷನ್ ಪ್ರಕಾರ, ಅವರು ನಿಂತಿದ್ದ ಸ್ಥಳದಿಂದ ಕೇವಲ 5 ಅಡಿ ದೂರದಲ್ಲಿ ಕಸದ ಬುಟ್ಟಿ ಇತ್ತು.
ಒಬ್ಬ ಸ್ಥಳೀಯ ಅಂಗಡಿಯವರು ಕೂಡ ಮಧ್ಯಪ್ರವೇಶಿಸಿ ಪ್ರವಾಸಿಗರನ್ನು ಹತ್ತಿರದ ಕಸದ ಬುಟ್ಟಿಯಲ್ಲಿ ತಮ್ಮ ಕಸವನ್ನು ಎಸೆಯುವಂತೆ ಕೇಳಿದ್ದು, ಇಲ್ಲವಾದಲ್ಲಿ ಕಸ ಹಾಕಿದ್ದಕ್ಕೆ ಪೊಲೀಸರು ತಮಗೆ ದಂಡ ವಿಧಿಸುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದರ ಮಧ್ಯೆಯೂ, ಆ ವ್ಯಕ್ತಿ ಪ್ಲಾಸ್ಟಿಕ್ ಚೀಲವನ್ನು ತೆಗೆದುಕೊಂಡು ಹತ್ತಿರದ ಕಣಿವೆಯೊಳಗೆ ಎಸೆಯುವ ಮೂಲಕ ಅಂಗಡಿಯವರ ವಿನಂತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇಷ್ಟರ ನಡುವೆ ಸೆಂಗುಪ್ತಾ ಅವರ ಸಹೋದರಿ ಕೇಕ್ ಬಾಕ್ಸ್ ಅನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಮತ್ತೆ ಕೇಳಿದ್ದು, ಈ ಹಂತದಲ್ಲಿ, ಪರಿಸ್ಥಿತಿ ತೀವ್ರಗೊಂಡಿದೆ. ಅಲ್ಲದೇ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ವಾದ – ವಿವಾದ ನಡೆದಿದೆ.
ಈ ವೀಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ, ಅವರು ಪ್ರವಾಸಿಗರನ್ನು ಪ್ರದೇಶದಲ್ಲಿ ಕಸ ಹಾಕಿದ್ದಕ್ಕಾಗಿ ಟೀಕಿಸಲು ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ.
View this post on Instagram