ಜಸ್ಪ್ರೀತ್ ಬುಮ್ರಾ ಗಬ್ಬಾದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ತ್ವರಿತ ವಿಕೆಟ್‌ಗಳನ್ನು ಪಡೆದ ನಂತರ ಮಂಗಳವಾರ ಭಾರತದ ದಂತಕತೆ ಕಪಿಲ್ ದೇವ್ ಅವರ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಬುಮ್ರಾ ಅವರನ್ನು ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಷ್ಯನ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರನ್ನಾಗುವಂತೆ ಮಾಡಿದೆ.
ಇನ್ನಿಂಗ್ಸ್‌ನ ಮೂರನೇ ಒವರ್‌ನಲ್ಲಿ ಉಸ್ಮಾನ್ ಖವಾಜಾ ಅವರನ್ನು ಬಲಗೈ ಬೌಲರ್ ಔಟ್ ಮಾಡಿದರು, ಅವರ ಬ್ಯಾಟ್ ಅಂಚಿಗೆ ಬಡಿದ ಚೆಂಡು, ನಂತರ ಹಿಂಭಾಗದ ಪ್ಯಾಡ್‌ಗೆ ತಗುಲಿ ಆಫ್ ಸ್ಟಂಪ್‌ಗೆ ತಾಗಿದೆ. ಒಂದು ಓವರ್ ನಂತರ, ಅವರು ಮಾರ್ನಸ್ ಲಾಬುಶೇನ್ ಅವರ ವಿಕೆಟ್ ಪಡೆದಿದ್ದಾರೆ.
ಈ ಎರಡು ವಿಕೆಟ್ ಗಳೊಂದಿಗೆ, ಬುಮ್ರಾ ಆಸ್ಟ್ರೇಲಿಯಾದಲ್ಲಿ ಏಷ್ಯನ್ ಬೌಲರ್‌ಗಳಿಂದ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಕಪಿಲ್ ಅವರ ದಾಖಲೆಯನ್ನು ಮೀರಿಸಿದ್ದಾರೆ. ಅವರು ಪ್ರಸ್ತುತ ಒಟ್ಟು 10 ಟೆಸ್ಟ್ ಪಂದ್ಯಗಳಲ್ಲಿ 17.21 ರ ಸರಾಸರಿಯಲ್ಲಿ 52 ವಿಕೆಟ್ ಪಡೆದಿದ್ದರೆ, ಭಾರತದ ಮಾಜಿ ನಾಯಕ ಕಪಿಲ್ ದೇವ್ ಆಸ್ಟ್ರೇಲಿಯಾದಲ್ಲಿ 11 ಪಂದ್ಯಗಳಲ್ಲಿ 51 ವಿಕೆಟ್‌ಗಳನ್ನು ಪಡೆದಿದ್ದರು, ನಂತರದ ಸ್ಥಾನದಲ್ಲಿ ಪಾಕಿಸ್ತಾನದ ಸರ್ಫರಾಜ್ ನವಾಜ್ (50 ವಿಕೆಟ್) ಇದ್ದಾರೆ.