ಮಂಡ್ಯ: ವಿವಾಹಿತ ಪ್ರೇಮಿಗಳ ಲವ್ ಕಹಾನಿ ಸಾವಿನಲ್ಲಿ ಅಂತ್ಯವಾಗಿದೆ. ನದಿಗೆ ಹಾರಿ ಯರಗನಹಳ್ಳಿ ಗ್ರಾಮದ ಸೃಷ್ಟಿ(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಆತ್ಮಹತ್ಯೆ ವಿಚಾರ ತಿಳಿದು ಪ್ರಿಯಕರ ನೇಣಿಗೆ ಶರಣಾಗಿದ್ದಾನೆ.
ಮದ್ದೂರು ತಾಲೂಕಿನ ಬನ್ನಹಳ್ಳಿ ನಿವಾಸಿ ಪ್ರಸನ್ನ(25) ಆತ್ಮಹತ್ಯೆ ಮಾಡಿಕೊಂಡವರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಹಳ್ಳಿ ಗ್ರಾಮದ ಪ್ರಸನ್ನ ಹಾಗೂ ಸೃಷ್ಟಿ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಒಂದೂವರೆ ವರ್ಷದ ಹಿಂದೆ ದಿನೇಶ್ ಎಂಬುವರ ಜೊತೆಗೆ ಸೃಷ್ಟಿ ಮದುವೆಯಾಗಿತ್ತು. 3 ವರ್ಷದ ಹಿಂದೆ ಸೃಷ್ಟಿ ಗೆಳತಿ ಸ್ಪಂನಾ ಜೊತೆಗೆ ಪ್ರಸನ್ನ ಮದುವೆಯಾಗಿದ್ದ, ಬೇರೆ ಮದುವೆಯಾಗಿದ್ದರೂ ಪ್ರಸನ್ನ ಮತ್ತು ಸೃಷ್ಟಿ ನಡುವೆ ಲವ್ವಿ ಡವ್ವಿ ಮುಂದುವರೆದಿತ್ತು. ಇದೇ ವಿಚಾರಕ್ಕೆ ಸೃಷ್ಟಿ ಮತ್ತು ಪತಿ ದಿನೇಶ್ ನಡುವೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 11ರಂದು ಗಂಡನ ಮನೆಯಿಂದ ಸೃಷ್ಟಿ ನಾಪತ್ತೆಯಾಗಿದ್ದಾಳೆ.
ನಂತರ ಆಲೂರು ವೈದ್ಯನಾಥಪುರ ಬಳಿ ಶಿಂಷಾ ನದಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಡಿಸೆಂಬರ್ 16ರಂದು ಶಿಂಷಾ ನದಿಯಲ್ಲಿ ಸೃಷ್ಟಿಯ ಶವ ಪತ್ತೆಯಾಗಿದ್ದು, ಸಾವಿನ ವಿಚಾರ ತಿಳಿದು ಪ್ರಸನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸೃಷ್ಟಿ ಹಾಗು ಸ್ಪಂದನಾ ಇಬ್ಬರನ್ನೂ ಪ್ರಸನ್ನ ಪ್ರೀತಿಸುತ್ತಿದ್ದ. ಸೃಷ್ಟಿ ಮತ್ತು ಪ್ರಸನ್ನ ಪತ್ನಿ ಸ್ಪಂದನಾ ಇಬ್ಬರೂ ಕ್ಲಾಸ್ ಮೇಟ್ ಗಳು. ಮದುವೆಯಾಗಿದ್ದರೂ ಸೃಷ್ಟಿಯ ಜೊತೆಗೆ ಪ್ರಸನ್ನ ಪ್ರೇಮಪುರಾಣ ಮುಂದುವರೆಸಿದ್ದ. ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.